ಪತಿಯ ಕ್ಯಾಟರಿಂಗ್ ಘಟಕದಲ್ಲಿ ಕೆಲಸಕ್ಕಿದ ಯುವಕನ ಜೊತೆ ಮೂರು ಮಕ್ಕಳ ತಾಯಿ ಲವ್ವಿ ಡವ್ವಿ | ಅಕ್ರಮ ಸಂಬಂಧ ಪ್ರಾಣಕ್ಕೇ ಕುತ್ತು ತಂದಿತೇ ?

Share the Article

ಪತಿ ನಡೆಸುತ್ತಿದ್ದ ಕ್ಯಾಟರಿಂಗ್ ಘಟಕದಲ್ಲಿ ಕೆಲಸಕ್ಕಿಂದ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಹಾಗೂ ಯುವಕ ಸೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕೇರಳದ ತ್ರಿಸ್ಸೂರ್ ನಲ್ಲಿ ನಡೆದಿದೆ.

ಮೃತರನ್ನು ಒಲರಿಕ್ಕರದ ನಿವಾಸಿ ರಿಜೊ( 26) ಮತ್ತು ಕರ್ಯತ್ತುಕುರಾ ನಿವಾಸಿ ಸಂಗೀತಾ ( 26) ಎಂದು ಗುರುತಿಸಲಾಗಿದೆ.

ಇಬ್ಬರೂ ಕೂಡಾ ನಿನ್ನೆ ಹೋಟೆಲ್ ರೂಂ ಬುಕ್ ಮಾಡಿದ್ದರು. ಎಷ್ಟೇ ಬಾಗಿಲು ಬಡಿದರೂ, ಕೂಗಿ ಕರೆದರೂ ಕೂಡಾ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಹೋಟೆಲ್ ಸಿಬ್ಬಂದಿಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದ ನಂತರ ಬಾಗಿಲು ಓಪನ್ ಮಾಡಿದಾಗ ಇಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸಂಗೀತಾ ಅವರಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಹಾಗಾಗಿಯೂ ಕೆಲಸಕ್ಕಿದ್ದವನ ಜೊತೆ ಅಕ್ರಮಸಂಬಂಧ ಇಟ್ಟುಕೊಂಡಿದ್ದಾಳೆ.

ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹೆಚ್ಚಿನ ತನಿಖೆಯನ್ನು ತ್ರಿಶೂರ್ ಪೊಲೀಸರು ಮಾಡುತ್ತಿದ್ದಾರೆ.

Leave A Reply