ಮದುವೆಯಾಗಿ 22 ತಿಂಗಳಾದರೂ ದೈಹಿಕ ಸುಖಕ್ಕೆ ಒಪ್ಪದ ಪತ್ನಿ| ಖಿನ್ನತೆಯಿಂದ ಪತಿ ಆತ್ಮಹತ್ಯೆ

Share the Article

ಮದುವೆಯಾಗಿದ್ದರೂ ಹೆಂಡತಿಯಿಂದ ದೈಹಿಕ ಸುಖ ಸಿಗದ ಕಾರಣ ವ್ಯಕ್ತಿಯೊಬ್ಬ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆಯಾಗಿ 22 ತಿಂಗಳು ಕಳೆದರೂ, ಜೊತೆಯಲ್ಲಿದ್ದರೂ ಪತ್ನಿ ದೈಹಿಕ‌ ಸಂಪರ್ಕಕ್ಕೆ ಒಪ್ಪದ ಕಾರಣ ಖಿನ್ನತೆಗೊಳಗಾಗಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಸುರೇಂದ್ರಸಿಂಗ್ ಎಂಬಾತನೇ ಆತ್ಮಹತ್ಯೆಗೆ ಶರಣಾದ ಪತಿ.

ಸುರೇಂದ್ರ ರೈಲ್ವೇ ಇಲಾಖೆಯಲ್ಲಿ ವೃತ್ತಿಯಲ್ಲಿದ್ದನು. ಈತನಿಗೆ ಇದು ಎರಡನೇ ಮದುವೆ. ಮೊದಲ ಮದುವೆಯಿಂದ ಡೈವೋರ್ಸ್ ಆಗಿತ್ತು. ನಂತರ ಗೀತಾ ಎಂಬುವವಳ ಜೊತೆ ನಡೆದದ್ದು ಎರಡನೇ ಮದುವೆ. ಈಕೆಗೆ ಇದು ಮೂರನೇ ಮದುವೆ. ಈಕೆ ಕೂಡಾ ಆ ಎರಡು ಮದುವೆಯಿಂದ ವಿಚ್ಛೇದನ ಪಡೆದುಕೊಂಡಿದ್ದಳು.

ಒಂದು ದಿನ ಅತ್ತೆ ಮಗ ಸೊಸೆ ಪ್ರತ್ಯೇಕವಾಗಿ ಮಲಗಿರುವುದನ್ನು ಗಮನಿಸುತ್ತಾರೆ. ಯಾಕೆ ಹೀಗೆ ಎಂದು ಮಗನಲ್ಲಿ ಕೇಳಿದಾಗ ಇಬ್ಬರ ಮಧ್ಯೆ ದೈಹಿಕ ಸಂಪರ್ಕ ನಡೆದಿಲ್ಲ ಎಂದು ತಿಳಿಯುತ್ತೆ. ಈ ಬಗ್ಗೆ ಅತ್ತೆ ಸೊಸೆಯಲ್ಲಿ ಕೇಳಿದಾಗ ಗಂಡನ ಜೊತೆ ಮಲಗಿಲಿಕ್ಕೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಇಬ್ಬರ ನಡುವೆ ಸಂಬಂಧ ಚೆನ್ನಾಗಿರಲಿಲ್ಲ. ಹೀಗಾಗಿ ಸೊಸೆ ತವರು ಮನೆ ಸೇರಿಕೊಂಡಿದ್ದಳು ಎಂದು ಅತ್ತೆ ಮಾಲಿ ಪರಮಾರ್ ಪೊಲೀಸರಲ್ಲಿ ದೂರನ್ನು ನೀಡಿದ್ದಾರೆ.

ಈ ಕಾರಣದಿಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇದಕ್ಕೆ ಸೊಸೆ ಪ್ರಚೋದಿಸಿದ್ದಾಳೆ ಎಂಬ ಮಾತನ್ನೂ ಹೇಳಿದ್ದಾರೆ.

Leave A Reply