ಬ್ಯಾಂಕ್ ಗ್ರಾಹಕರೇ ಗಮನಿಸಿ : ಮರಣಹೊಂದಿದವರ ATM ನಿಂದ ಹಣ ಡ್ರಾ ಮಾಡುವುದು ಕಾನೂನು ಬಾಹಿರ| ಹೀಗೆ ಮಾಡಿದರೆ ಜೈಲು ಶಿಕ್ಷೆ ಖಂಡಿತ

Share the Article

ಡಿಜಿಟಲ್ ಬ್ಯಾಂಕಿಂಗ್ ಆರಂಭವಾದ ನಂತರ ಇತ್ತೀಚೆಗೆ ಹಲವಾರು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ.

ಹಾಗೆಯೇ ಮೃತರ ಎಟಿಎಂನಿಂದ ಹಣ ತೆಗೆಯುವುದು ಕಾನೂನು ಬಾಹಿರ ಯಾರೋ ಒಬ್ಬರು ಸತ್ತ ನಂತರ ಅವರ ಖಾತೆಯಿಂದ ಕುಟುಂಬದ ಸದಸ್ಯರು ಎಟಿಎಂ ಮೂಲಕ ಹಣ ಡ್ರಾ ಮಾಡಿದ್ದು ಅಕ್ರಮ ಎಸಗಿರುವ ಘಟನೆ ಹಲವು ಬಾರಿ ಕಂಡಿದೆ.

ಯಾರೊಬ್ಬರ ಮರಣಾನಂತರ ನಾಮಿನಿ ಕೂಡಾ ಖಾತೆಯಿಂದ ಹಣವನ್ನು ಪಡೆಯಲು ಸಾಧ್ಯವಿಲ್ಲ.

ಕಾನೂನಿನ ಪ್ರಕಾರ, ಯಾರಾದರೂ ಸತ್ತ ನಂತರ ಅವರ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ ಮಾಡುವುದು ತಪ್ಪು. ವ್ಯಕ್ತಿಯ ಮರಣದ ನಂತರ ನಿಮ್ಮ ಹೆಸರಿಗೆ ಎಲ್ಲಾ ಆಸ್ತಿಗಳನ್ನು ವರ್ಗಾಯಿಸುವವರೆಗೆ ನೀವು ಅವರ ಹಣದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಈ ಹಣವನ್ನು ಪಡೆಯಲು ಖಾತೆದಾರರು ಮರಣಹೊಂದಿದ್ದಾರೆ ಎಂದು ನೀವು ಮೊದಲು ಬ್ಯಾಂಕ್ ಗೆ ತಿಳಿಸಬೇಕು. ನಂತರ ನಾಮಿನಿಯ ಸಂಪೂರ್ಣ ಪ್ರಕ್ರಿಯೆಯನ್ನು ಮಾಡಬೇಕು. ಒಂದು ವೇಳೆ ಆ ಖಾತೆಯಲ್ಲಿ ಒಂದಕ್ಕಿಂತ ಹೆಚ್ಚು ನಾಮಿನಿಗಳಿದ್ದರೆ, ಎಲ್ಲಾ ನಾಮಿನಿಗಳು ಬ್ಯಾಂಕ್ ಗೆ ಒಪ್ಪಿಗೆ ಪತ್ರವನ್ನು ತೋರಿಸಿ ಖಾತೆಯಿಂದ ಹಣ ಪಡೆಯಬಹುದು.

Leave A Reply