ಸಾಮಾಜಿಕ ಜಾಲತಾಣದಲ್ಲಿ ಪೇಚಿಗೆ ಸಿಲುಕಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್!! ಎಡಿಟೆಡ್ ಫೋಟೋ ಹಾಕಿ ಜನರನ್ನು ನಂಬಿಸಲು ಮಾಡಿದ ಪ್ರಯತ್ನ ಪುಸ್ಕ

Share the Article

ಭಾರತದಲ್ಲಿ ಪ್ರಧಾನಿಯ ಬಳಿಕ ಅತೀ ಹೆಚ್ಚು ಸದ್ದು ಮಾಡಿದ, ತನ್ನ ಉತ್ತಮವಾದ ನಿಲುವುಗಳಿಂದ ಜನಮನಗೆದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆ ಒಂದು ಫೋಟೋ ದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಪೇಚಿಗೆ ಸಿಲುಕಿದಲ್ಲದೆ, ವ್ಯಾಪಕ ಟೀಕೆಗೂ ಗುರಿಯಾಗಿದ್ದಾರೆ.

ಸಾರ್ವಜನಿಕ ಸಭೆಯೊಂದರಲ್ಲಿ ತನ್ನ ಸಭೆಗೆ ಅತೀ ಹೆಚ್ಚು ಜನ ಸೇರಿದಂತೆ ಫೋಟೋ ಶಾಪ್ ಮಾಡಿ ಟ್ವಿಟರ್ ಖಾತೆಯೊಂದರಲ್ಲಿ ಯೋಗಿ ಹಂಚಿಕೊಂಡಿದ್ದರು. ಇಲ್ಲಿ ಯೋಗಿ ಒಂದು ಕಡೆಗೆ ಕೈಬೀಸಿದರೆ, ನೆರೆದಿದ್ದ ಜನ ಇನ್ನೊಂದೆಡೆ ಕೈ ಬೀಸಿದ್ದು ಸ್ಪಷ್ಟವಾಗಿ ಕಾಣುತ್ತಿದ್ದೂ ಯೋಗಿಯ ಟ್ವೀಟ್ ಗೆ ಆಲ್ಟ್ ನ್ಯೂಸ್ ಪತ್ರಕರ್ತರೋರ್ವರು ಪ್ರತಿಕ್ರಿಯೆ ನೀಡಿದ್ದಾರೆ.

ಯೋಗಿ ಕೈ ಬೀಸುವ ಚಿತ್ರವೊಂದು ಡಿಸೆಂಬರ್ 25 ರಂದು ಔಟ್ ಲುಕ್ ಎಂಬ ವೆಬ್ ಪೇಜ್ ಒಂದರಲ್ಲಿ ಪ್ರಕಟಗೊಂಡಿದ್ದು, ಈ ಚಿತ್ರದಲ್ಲಿ ಕಾಣುವ ಜನಸಮೂಹ ಎಲ್ಲಿಯ ಚಿತ್ರ ಎಂಬುವುದು ಪತ್ತೆಯಾಗಿಲ್ಲ. ಸದ್ಯ ಯೋಗಿಯ ಎಡಿಟೆಡ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ನಡುವೆಯೇ ಯೋಗಿಯ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Leave A Reply