ಮದುವೆ ಮನೆಯಲ್ಲಿನ ಸಂಪ್ರಯದಾಯವೇ ಸೂತಕ ಆವರಿಸಲು ಕಾರಣವಾಯಿತೇ!?? ಭೀಕರ ದುರಂತದಲ್ಲಿ ಮಹಿಳೆಯರ ಸಹಿತ ಹನ್ನೊಂದು ಮಂದಿ ಜಲಸಮಾಧಿ

Share the Article

ಮದುವೆಯ ಮನೆಯಲ್ಲಿ ನಡೆಯುವ ಅದೊಂದು ಸಂಪ್ರಯದಾಯ ಭೀಕರ ದುರಂತಕ್ಕೆ ಕಾರಣವಾಗಿದ್ದು, ಮದುವೆಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಉತ್ತರಪ್ರದೇಶದ ಕುಶಿ ನಗರ ಜಿಲ್ಲೆಯ ಮದುವೆ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದ್ದು ಸಂಪ್ರದಾಯದ ಪ್ರಕಾರ ಗಂಗಾ ಪೂಜೆ ನೆರವೇರುವ ವೇಳೆ ಹನ್ನೊಂದು ಮಂದಿ ಬಾವಿ ಪಾಲಾಗಿದ್ದಾರೆ.

ಪೂಜೆಯ ನಿಮಿತ್ತ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದ ವೇಳೆ ಭಾರ ಹೆಚ್ಚಾಗಿ ತಡೆಗೋಡೆ ಕುಸಿದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಹನ್ನೊಂದು ಮಂದಿ ಜಲಸಮಾಧಿಯಾಗಿದ್ದಾರೆ.

Leave A Reply