ದೇವಸ್ಥಾನಗಳಲ್ಲಿ ಗಂಟೆ, ಜಾಗಟೆ ಶಬ್ದ ನಿರ್ಬಂಧ ಆದೇಶ ಹಿಂಪಡೆದ ಧಾರ್ಮಿಕ ದತ್ತಿ ಇಲಾಖೆ!!!

ಬೆಂಗಳೂರು : ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ‘ ದೇವಸ್ಥಾನಗಳಲ್ಲಿ ಜಾಗಟೆ, ಗಂಟೆ, ಶಂಖ, ಊದುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಹಾಗಾಗಿ ಅವುಗಳನ್ನು ಬಳಸದಂತೆ ನಿರ್ಬಂಧ ವಿಧಿಸಿದ್ದ‌ ಆದೇಶವನ್ನು ಧಾರ್ಮಿಕ ದತ್ತಿ ಇಲಾಖೆ ಹಿಂಪಡೆದಿದೆ ಎಂಬುದಾಗಿ ತಿಳಿಸಿದೆ.

ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಈಗಾಗಲೇ ಹಿಂಪಡೆಯಲಾಗಿದ್ದು, ಯಾರಿಗೂ ಗೊಂದಲ ಬೇಡ. ಇನ್ನು ಇದನ್ನು ಯಾವುದೋ ಒಂದು ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನೋಟಿಸ್ ನೀಡಿರಲಿಲ್ಲ. ಕೆಲವೊಂದು ಗೊಂದಲ ಉಂಟಾಗಿದ್ದರಿಂದ ಈ ಆದೇಶವನ್ನು ಹಿಂಪಡೆಯಲಾಗಿದೆ’ ಎಂದು ವಿಧಾನಸಭೆಯಲ್ಲಿ ಸಿ ಟಿ ರವಿ ಹಾಗೂ ರವಿ ಸುಬ್ರಹ್ಮಣ್ಯ ಪ್ರಶ್ನೆಗೆ ಗೃಹಸಚಿವರು ಉತ್ತರಿಸಿದ್ದಾರೆ.

ಹಿನ್ನೆಲೆ : ದಿನ ನಿತ್ಯ ಮಹಾ ಮಂಗಳಾರತಿ, ಅಭಿಷೇಕ, ವಿಶೇಷ ಪೂಜೆ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಎಲೆಕ್ಟ್ರಿಕ್ ಘಂಟಾನಾದ ವ್ಯವಸ್ಥೆ, ಢಮರುಗ, ಧ್ವನಿವರ್ಧಕ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಡೆಸಿಬಲ್ ಶಬ್ದ ಇವುಗಳಿಂದ ಹೊರ ಹೊಮ್ಮುತ್ತದೆ ಎಂಬ ಆರೋಪ ಇತ್ತು. ಈ ಕಾರಣಕ್ಕಾಗಿ ಧಾರ್ಮಿಕ ದತ್ತಿ ಇಲಾಖೆ ನೋಟಿಸ್ ನೀಡಿತ್ತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ರದಂತೆ ಶಬ್ದ ಮಾಲಿನ್ಯ ನಿಯಂತ್ರಣ ( ತಿದ್ದುಪಡಿ) ಕಾಯ್ದೆ 2010, ಪರಿಸರ ಸಂರಕ್ಷಣಾ ಕಾಯ್ದೆ 1986 ರ ಅನ್ವಯ ನಿಗದಿತ ಡೆಸಿಬಲ್ ಶಬ್ದ ಪ್ರಮಾಣಕ್ಕಿಂತ ಹೆಚ್ಚಿನ ಶಬ್ದ ಮಾಡುವ ಸಂಗೀತ ಸಾಧನಗಳನ್ನು ಬಳಸದಂತೆ ತಿಳಿಸಲಾಗಿತ್ತು.

Leave A Reply

Your email address will not be published.