ವಾಹನ ಸವಾರರೇ ಇತ್ತ ಗಮನಿಸಿ : ಇನ್ನು ಮುಂದೆ ಬೈಕ್ ನಲ್ಲಿ ತೆರಳೋದಕ್ಕೆ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ | ಕೇಂದ್ರ ಸರಕಾರ
ನವದೆಹಲಿ : ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ಮಾಡುವ ಮಕ್ಕಳು ಇನ್ನು ಮುಂದೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರಕಾರ ಕಡ್ಡಾಯ ಮಾಡಿದೆ.
ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್ ತಯಾರಿಸಲು ಸರಕಾರ ಹೆಲ್ಮೆಟ್ ತಯಾರಿಕರಿಗೆ ಸೂಚಿಸಿದೆ.
ಈ ಹೊಸ ನಿಯಮದ ಅಡಿಯಲ್ಲಿ ಯಾವುದೇ ಉಲ್ಲಂಘನೆಯಾದರೆ ಒಂದು ಸಾವಿರ ರೂಪಾಯಿಗಳ ದಂಡ ಮತ್ತು ಚಾಲಕನ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತು ಮಾಡಲಾಗುವುದು. ಹೊಂದಾಣಿಕೆ ಮಾಡಬಹುದಾದ ಸುರಕ್ಷತಾ ಹಾರ್ನೆಸ್ ನ್ನು ಮಕ್ಕಳು ತಮ್ಮ ಸುರಕ್ಷತೆಗಾಗಿ ಧರಿಸಬೇಕು.
ಮಗುವಿನೊಂದಿಗೆ ಪ್ರಯಾಣಿಸುವಾಗ ಗಂಟೆಗೆ 40 ಕಿ.ಮೀ. ವೇಗ ಮಿತಿಯಲ್ಲಿ ಪ್ರಯಾಣಮಾಡಬೇಕಾಗುತ್ತದೆ. ಹಾರ್ನೆಸ್ ಕಡಿಮೆ ತೂಕ, ಹೊಂದಿಸಬಹುದಾದ, ವಾಟರ್ ಫ್ರೂಫ್ ಮತ್ತು ಬಾಳಿಕೆ ಬರುವಂತಾಗಿರುತ್ತದೆ. ಹೆಚ್ಚಿನ ಸಾಂದ್ರತೆಯ ನೊರೆಯೊಂದಿಗೆ ಭಾರವಾದ ನೈಲಾನ್ ಅಥವಾ ಮಲ್ಟಿಫೈಲಮೆಂಟ್ ನೈಲಾನ್ ವಸ್ತುವನ್ನು ಬಳಸಿ ಹಾರ್ನೆಸ್ ನ್ನು ನಿರ್ಮಿಸಲಾಗುವುದು. 30 ಕೆಜಿಯವರೆಗೆ ಹಿಡಿದಿಟ್ಟುಕೊಳ್ಳಬಹುದು. ನಾಲ್ಕು ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಸರಕಾರ ನಿರ್ದಿಷ್ಟಪಡಿಸಿದ ಮಾನದಂಡಗಳನ್ನು ಅನುಸರಿಸಿ ಕ್ರ್ಯಾಶ್ ಹೆಲ್ಮೆಟ್ ಅಥವಾ ಬೈಸಿಕಲ್ ಹೆಲ್ಮೆಟ್ ಧರಿಸಬೇಕು.