ತನ್ನೆರಡು ಕೈಗಳನ್ನೂ ಬಿಟ್ಟು ಕುದುರೆ ಓಡಿಸಿದ 70 ವರ್ಷದ ಮುದುಕ !! | ಇಳಿವಯಸ್ಸಿನಲ್ಲೂ ಛಲಬಿಡದೆ ಆತ ಕುದುರೆ ಸವಾರಿ ಮಾಡಿದ್ದನ್ನು ಕಂಡು ನಿಬ್ಬೆರಗಾದ ಪ್ರೇಕ್ಷಕರು

Share the Article

ಸಾಧನೆಗೆ ವಯಸ್ಸು ಯಾಕೆ ಬೇಕು? ಛಲ, ಆತ್ಮವಿಶ್ವಾಸ ಇದ್ದರೆ ಸಾಕು. ಎಂತ ಕೆಲಸವೇ ಆಗಲಿ ನಾ ಮಾಡಬಲ್ಲೆ ಎಂಬ ದೃಢ ನಿರ್ಧಾರ ಮಾಡಿದರೆ ಯಾರೂ ತಡೆಯಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಎಂಬಂತಿದೆ ಈ ಇಳಿವಯಸ್ಸಿನ ವೃದ್ಧನ ಯವ್ವನದ ಸ್ಟೋರಿ.

ಮಹಾರಾಷ್ಟ್ರದ ಮಾವಲ್ ನಲ್ಲಿ 75 ವರ್ಷದ ವ್ಯಕ್ತಿಯೊಬ್ಬರು ಎಲ್ಲರನ್ನು ನಿಬ್ಬೆರಗಾಗಿಸುವ ಸಾಧನೆ ಮಾಡಿದ್ದಾರೆ. ವೃದ್ಧರು ತಮ್ಮ ಎರಡೂ ಕೈಗಳನ್ನು ಬಿಟ್ಟು ಕುದುರೆ ಓಡಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು,ವೃದ್ಧರ ಧೈರ್ಯ ಹಾಗೂ ಅವರ ಈ ವಿಶೇಷ ಕೌಶಲ್ಯವನ್ನು ಜನ ಕೊಂಡಾಡುತ್ತಿದ್ದಾರೆ.

ವಾಸ್ತವದಲ್ಲಿ ಮಾವಳ್ ಪ್ರದೇಶದಲ್ಲಿ ಎತ್ತಿನ ಗಾಡಿಗಳ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಓಟದ ವೇಳೆ ಮಧುಕರ್ ಪಾಂಚಪುತೆ ಎಂಬ ವೃದ್ಧರು ಎತ್ತಿನ ಗಾಡಿಯ ಮುಂದೆ ಓಡುತ್ತಿರುವ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದರು. ಕುದುರೆ ಎಷ್ಟು ವೇಗವಾಗಿ ಓಡುತ್ತದೆಯೋ ಅಷ್ಟು ವೇಗವಾಗಿ ಎತ್ತಿನ ಗಾಡಿ ಓಡುತ್ತದೆ ಎಂಬ ನಂಬಿಕೆ ಈ ಪ್ರದೇಶದಲ್ಲಿದೆ. ಓಟ ಆರಂಭವಾದ ಕೂಡಲೇ ಮಧುಕರ್ ತನ್ನ ಕುದುರೆಯ ಮೇಲೆ ಬುಲೆಟ್‌ನ ವೇಗದಲ್ಲಿ ಧಾವಿಸಿದ್ದಾರೆ. ಮತ್ತು ಕಣ್ಣು ಮಿಟುಕಿಸುವುದರೊಳಗೆ ಅವರು ಗಾಳಿಯ ಮೇಲೆ ಸವಾರಿ ಮಾಡುತ್ತಿದ್ದಾರೆಯೇ ಎಂಬಂತೆ ತೋರಿದೆ.

ಈ ದೃಶ್ಯವನ್ನು ನೋಡಿದ ಜನರು ದಂಗಾಗಿದ್ದಾರೆ.ಏಕೆಂದರೆ 75ರ ಹರೆಯದ ವೃದ್ಧರೊಬ್ಬರು ಇಂಥದ್ದೊಂದು ಸಾಧನೆ ಮಾಡಬಲ್ಲರು ಎಂದರೆ ಯಾರೂ ಊಹಿಸಿರಲಿಲ್ಲ.ಮಧುಕರ್ ತನ್ನ ಕುದುರೆಯನ್ನು ಯಾವುದೇ ಭಯ ಅಥವಾ ಭೀತಿ ಇಲ್ಲದೆ ತನ್ನ ಕೈಗಳನ್ನು ಬಿಟ್ಟು ಓಡಿಸುತ್ತಿದ್ದರು.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು,ಅಲ್ಲಿಯೂ ಅವರ ಧೈರ್ಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.ಇವರ ಸಾಧನೆಯಿಂದ ನೂರಾರು ಯುವಕರಿಗೆ ಸ್ಫೂರ್ತಿ ದೊರೆತಂತಾಗಿದೆ.

Leave A Reply