Home Interesting ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡರೆ, ಹಣೆಗೆ ಬೊಟ್ಟು ಇಟ್ಟರೆ ಅದು ವಿವಾದವಲ್ಲ ಎಂದ ಬಿಹಾರ ಸಿಎಂ ನಿತೀಶ್...

ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡರೆ, ಹಣೆಗೆ ಬೊಟ್ಟು ಇಟ್ಟರೆ ಅದು ವಿವಾದವಲ್ಲ ಎಂದ ಬಿಹಾರ ಸಿಎಂ ನಿತೀಶ್ ಕುಮಾರ್

Hindu neighbor gifts plot of land

Hindu neighbour gifts land to Muslim journalist

ಪಟ್ನಾ:ಹಿಜಾಬ್ ವಾದದ ಕುರಿತು ಬಿಹಾರ
ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ ‘ಪ್ರತಿಯೊಬ್ಬ ವ್ಯಕ್ತಿಗೂ ಅವರು ಬಯಸಿದ್ದನ್ನು ಧರಿಸುವ ಹಕ್ಕಿದೆ,ಯಾರಾದರೂ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡರೆ, ಹಣೆಯ ಮೇಲೆ ಶ್ರೀಗಂಧದ ಬೊಟ್ಟು ಇಟ್ಟುಕೊಂಡರೆ ಅದು ವಿವಾದಾತ್ಮಕ ವಿಷಯವಾಗುವುದಿಲ್ಲ ‘ಎಂದು ನಾನು
ನಂಬುತ್ತೇನೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸರ್ಕಾರ
ರಚಿಸಿರುವ ಜೆಡಿಯು ವರಿಷ್ಠ ಮುಖ್ಯಮಂತ್ರಿ
ನಿತೀಶ್ ಅವರ ಈ ಹೇಳಿಕೆಯು ಕರ್ನಾಟಕದ
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ
ಪಡೆದಿದೆ.ಈ ವಿಷಯದಲ್ಲಿ ನಮ್ಮದೇನೂ ಆಕ್ಷೇಪಗಳಿಲ್ಲ.
ಅಂತಹ ಯಾವ ವಿವಾದಗಳೂ ಬಿಹಾರದಲ್ಲಿಲ್ಲ’
ಬಿಹಾರದ ಶಾಲೆಗಳಲ್ಲಿ ಮಕ್ಕಳು ಒಂದೇ ರೀತಿಯ
ಬಟ್ಟೆ ಧರಿಸುತ್ತಾರೆ. ನಾವು ಪರಸ್ಪರರ ಧಾರ್ಮಿಕ
ಭಾವನೆಗಳನ್ನು ಗೌರವಿಸುತ್ತೇವೆ.ಅವರ ಧರ್ಮ ಅಥವಾ ಸಂಸ್ಕೃತಿಯ ಆಚರಣೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ.ಆದ್ದರಿಂದಲೇ ಇಂತಹ ವಿಷಯಗಳತ್ತ ಗಮನ ಹರಿಸುವುದಿಲ್ಲ ಎಂದಿದ್ದಾರೆ.