ಮಗಳನ್ನು ಕಿಡ್ನಾಪ್ ಮಾಡಿದ ಅಪ್ಪ| ನವವಧು ಗಂಡನ ತೆಕ್ಕೆಯಲ್ಲಿರುವಾಗಲೇ ಎಳೆದುಕೊಂಡ ಹೋದ ತಂದೆ| ಗಂಡನಿಂದ ದೂರು ದಾಖಲು

Share the Article

ಎರಡು ವರ್ಷಗಳಿಂದ ಪ್ರೀತಿಸಿ, ಮನೆಯವರ ವಿರೋಧದ ನಡುವೆ ಮದುವೆಯಾದ ಹುಡುಗಿಯನ್ನು ಪ್ರೇಮಿಗಳ ದಿನಾಚರಣೆಯಂದೆ ಹುಡುಗಿಯ ಅಪ್ಪನೇ ಕಿಡ್ನಾಪ್ ಮಾಡಿದ ಆರೋಪ ಕೇಳಿ ಬಂದಿದೆ.

ನಿಖಿಲ್ ರಾಜ್ ಎಂಬ ಯುವಕ ಮಹಿಮಾ ಎಂಬಾಕೆಯನ್ನು ಕಳೆದ ಎರಡು ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಆದರೆ ಮಹಿಮಾ ಅವರ ಪ್ರೇಮ ಸಂಬಂಧಕ್ಕೆ ಅವರ ಮನೆ ಕಡೆಯಿಂದ ತೀರಾ ವಿರೋಧ ಇತ್ತು ಎನ್ನಲಾಗಿದೆ. ಇದರ ಮಧ್ಯೆ ಫೆ. 7 ರಂದು ದೇವಸ್ಥಾನದಲ್ಲಿ ಮದುವೆಯಾಗಿ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿದ್ದಾರೆ.

ಅನಂತರ ಮಧುಮಗಳು‌ ಮಹಿಮಾ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೋರಿ ದೂರು ನೀಡಿದ್ದರು. ನಾನು ಈ ಮದುವೆಯನ್ನು ಯಾರ ಬಲವಂತದಿಂದ ಕೂಡಾ ಆಗಿಲ್ಲ, ನನ್ನ ಸ್ವ ಇಚ್ಛೆಯಿಂದ ಮದುವೆಯಾಗಿದ್ದೇನೆ ಎಂಬ ಹೇಳಿಕೆ ಕೂಡ ನೀಡಿದ್ದಳು.

ಆದರೆ ಪೊಲೀಸರ ಮಾತಿಗೆ ಬೆಲೆ ಕೊಡದ ರಾಜಣ್ಣ ಫೆ.13 ರಂದು ಮಧ್ಯಾಹ್ನ 12 ಗಂಟೆ ವೇಳೆಗೆ 35 ಜನರೊಂದಿಗೆ ಸಿಂಗನಾಯಕನಹಳ್ಳಿಯ ಹುಡುಗನ ಮನೆಗೆ ನುಗ್ಗಿ ಮಗಳನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ ಅನ್ನುವ ಆರೋಪವಿದೆ.

ನನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ನಿಖಿಲ್ ರಾಜ್ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

Leave A Reply