ಮದುವೆಯಾದ ಐದನೇ ದಿನಕ್ಕೆ ಶವವಾಗಿ ಪತ್ತೆಯಾದ ನವ ವಧು!! ಸಾವಿನ ಸುತ್ತ ಹಲವು ಅನುಮಾನ

Share the Article

ಮದುವೆಯಾಗಿ ಐದನೇ ದಿನಕ್ಕೆ ನವ ವಧುವೊಬ್ಬಳು ಶವವಾಗಿ ಪತ್ತೆಯಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಮೃತ ನವ ವಧುವನ್ನು ಆರ್ಯ(26)ಎಂದು ಗುರುತಿಸಲಾಗಿದೆ.

ಜಿಲ್ಲೆಯ ಶರತ್ ಎಂಬವರೊಂದಿಗೆ ಕಳೆದ ಸೋಮವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಆರ್ಯ ಐದನೇ ದಿನಕ್ಕೆ ಶವವಾಗಿ ಪತ್ತೆಯಾಗಿದ್ದರಿಂದ ಪ್ರಕರಣವು ಹಲವು ಅನುಮಾನಗಳನ್ನು ಮೂಡಿಸುತ್ತಿದೆ.

ಜೆರಾಕ್ಸ್ ತೆಗೆದುಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಟಿದ್ದಾರೆ ಆರ್ಯ ಆ ಬಳಿಕ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದು,ಕೆಲವೇ ಹೊತ್ತಿನಲ್ಲಿ ಆರ್ಯ ಮೃತದೇಹ ಕಡಲುಂಡಿ ಎಂಬಲ್ಲಿನ ಹೊಳೆಯೊಂದರಲ್ಲಿ ಪತ್ತೆಯಾಗಿತ್ತು.

ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದು,ಪ್ರಕರಣ ಯಾವ ಹಂತ ತಲುಪುತ್ತದೆ ಎಂಬುವುದು ತನಿಖೆಯ ಬಳಿಕ ತಿಳಿಯಬೇಕಾಗಿದೆ.

Leave A Reply