ಅಂಗಡಿ ಬಾಗಿಲು ಹಾಕದೇ ಟೀ ಕುಡಿಯಲು ಹೋದ ಮಾಲೀಕ| ವಾಪಾಸು ಬಂದು ನೋಡಿದಾಗ ಬಿಗ್ ಶಾಕ್!!!

Share the Article

ಅಂಗಡಿ ಮಾಲೀಕನೊಬ್ಬ ಅಂಗಡಿ ಬಾಗಿಲು ಮುಚ್ಚದೇ ಹತ್ತಿರದಲ್ಲೇ ಇದ್ದ ಟೀ ಅಂಗಡಿಗೆ ಹೋಗಿ ಬಂದು ನೋಡಿದಾಗ ಗಲ್ಲಾಪೆಟ್ಟಿಗೆಯಲ್ಲಿದ್ದ ಕ್ಯಾಶ್ ಇಲ್ಲದಾಗಿದೆ.

ಇಲ್ಲೇ ಹತ್ತಿರದಲ್ಲಿ ಟೀ ಅಂಗಡಿ ಇದೆ ಅಂತಾ ತನ್ನ ಅಂಗಡಿ ಬಾಗಿಲು ಮುಚ್ಚದೇ ಹೊರಗಡೆ ಹೋದರೆ ಏನಾಗಬಹುದು ಎಂಬುದಕ್ಕೆ ಇದೇ ನಿದರ್ಶನ.

ಈ ಘಟನೆ ನಡೆದಿರುವುದು ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಕಲ್ಲೇಶ್ವರ ಟೈಲ್ಸ್ ಶಾಪ್ ನಲ್ಲಿ ನಡೆದಿದೆ. ಹಣ ಕಳವು ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರಾಮದಲ್ಲಿ ಟೀ ಕುಡಿದು ಬಂದ ಅಂಗಡಿ ಮಾಲೀಕ ಕ್ಯಾಶ್ ಕೌಂಟರ್ ನೋಡಿದಾಗ ಹಣ ಇಲ್ಲದಿರುವುದು ಗೊತ್ತಾಗಿದೆ.

ಕಳ್ಳ ಮಾಲೀಕ ಟೀ ಕುಡಿಯಲು ಹೋಗಿದ್ದ ಸಮಯವನ್ನು ನೋಡಿ ಯಾರೂ ಇಲ್ಲದಿದ್ದನ್ನು ಗಮನಿಸಿ 10 ಸಾವಿರ ರೂ. ಕದ್ದು ಪರಾರಿಯಾಗಿದ್ದಾನೆ.

ಈಗ ಅಂಗಡಿ ಮಾಲೀಕ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ಮಾಡಲಿದ್ದಾರೆ.

Leave A Reply