ವಾಹನ ಸವಾರರೇ ಗಮನಿಸಿ- ಇನ್ನು ಮುಂದೆ ವಾಹನ ಚಲಾಯಿಸಿವಾಗ ಫೋನ್ ನಲ್ಲಿ ಮಾತನಾಡಿದರೆ ಶಿಕ್ಷಾರ್ಹ ಅಪರಾಧವಾಗುವುದಿಲ್ಲ: ನಿತಿನ್ ಗಡ್ಕರಿ

Share the Article

ನವದೆಹಲಿ : ಇತ್ತೀಷೆಗಷ್ಟೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ‘ವಾಹನ ಚಲಾಯಿಸುವ ವೇಳೆ ಮೊಬೈಲ್ ನಲ್ಲಿ ಮಾತನಾಡಿದರೆ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ‘ ಎಂಬುದಾಗಿ ಹೇಳಿದ್ದರು.

ವಾಹನ ಚಲಾಯಿಸುವಾಗ ಒಂದು ವೇಳೆ ನಿಮ್ಮ‌ ಬಳಿ ಮೊಬೈಲ್ ಇದ್ದರೆ, ಅದು ಹ್ಯಾಂಡ್ಸ್ ಫ್ರೀ ಸಾಧನಕ್ಕೆ ಸಂಪರ್ಕಗೊಂಡಿದ್ದರೆ ಮಾತ್ರ ಅನುಮತಿ ನೀಡಲಾಗುವುದು. ಅಲ್ಲದೆ ಮೊಬೈಲ್ ಕಾರಿನಲ್ಲಿ ಇಡುವುದರ ಬದಲಾಗಿ ಪಾಕೆಟ್ ನಲ್ಲಿ ಇಡಬೇಕು ಎಂದು ಲೋಕಸಭೆಯಲ್ಲಿ ಗಡ್ಕರಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಈ ಹೇಳಿಕೆ ಪ್ರಕಾರ ಒಂದು ವೇಳೆ ಹ್ಯಾಂಡ್ಸ್ ಫ್ರೀ ಸಾಧನವನ್ನು ಬಳಸಿ, ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಟ್ರಾಫಿಕ್ ಪೊಲೀಸರು ಇದಕ್ಕೆ ದಂಡ ವಿಧಿಸಲು ಸಾಧ್ಯವಿಲ್ಲ. ಒಂದು ದಂಡ ವಿಧಿಸಿದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದಿದ್ದಾರೆ.

Leave A Reply