Home Breaking Entertainment News Kannada ತನ್ನ ಮಗುವಿಗೆ ಭಾರತದ ಕ್ರಿಕೆಟ್ ಸ್ಟೇಡಿಯಂ ನ ಹೆಸರಿಟ್ಟ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ !!...

ತನ್ನ ಮಗುವಿಗೆ ಭಾರತದ ಕ್ರಿಕೆಟ್ ಸ್ಟೇಡಿಯಂ ನ ಹೆಸರಿಟ್ಟ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ !! | ಆ ಸ್ಟೇಡಿಯಂನ ಹೆಸರಿಡಲು ಕಾರಣ ಏನು ಗೊತ್ತಾ??

Hindu neighbor gifts plot of land

Hindu neighbour gifts land to Muslim journalist

ಭಾರತ ದೇಶವನ್ನು ನೆಚ್ಚಿಕೊಳ್ಳದ ವಿದೇಶಿಗರಿಲ್ಲ. ಒಂದಲ್ಲ ಒಂದು ರೀತಿಯಿಂದ ನಮ್ಮ ದೇಶ ವಿದೇಶಿಗರ ಮನಸೆಳೆಯುತ್ತಲೇ ಇರುತ್ತದೆ. ಅದೆಷ್ಟೋ ವಿದೇಶಿಗರು ಭಾರತದ ಮೇಲಿನ ಗೌರವ, ಪ್ರೀತಿಗಾಗಿ ಏನಾದರೊಂದು ನೆನಪಿನ ಕಾರ್ಯ ಮಾಡುತ್ತಾರೆ. ಆ ಸಾಲಿಗೆ ಇದೀಗ ವೆಸ್ಟ್ ಇಂಡೀಸ್ ಖ್ಯಾತ ಕ್ರಿಕೆಟ್ ಆಟಗಾರ ಸೇರ್ಪಡೆಯಾಗಿದ್ದಾರೆ.

ಹೌದು, ವೆಸ್ಟ್ ಇಂಡೀಸ್ ಆಲ್‍ರೌಂಡರ್ ಕಾರ್ಲೋಸ್ ಬ್ರಾಥ್‍ವೈಟ್ ಅವರ ಪತ್ನಿ ಫೆ.6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಭಾರತದ ಕ್ರಿಕೆಟ್ ಕ್ರೀಡಾಂಗಣ ಈಡನ್ ಗಾರ್ಡನ್ಸ್ ನ ನೆನಪಿಗಾಗಿ ಈಡನ್ ರೋಸ್ ಎಂದು ನಾಮಕರಣ ಮಾಡಿದ್ದಾರೆ.

ಬ್ರಾಥ್‍ವೈಟ್ ಅವರು ತಮ್ಮ ಮಗಳಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನ ಹೆಸರಿಡಲು ಪ್ರಮುಖ ಕಾರಣವೆನೆಂದರೆ, ಈಡನ್ ಗಾರ್ಡನ್ಸ್ ಮೈದಾನದಲ್ಲಿ ಅವರು ಇಂಗ್ಲೆಂಡ್‍ನ ಬೌಲರ್ ಬೆನ್ ಸ್ಟೋಕ್ಸ್ ಅವರ ಬೌಲಿಂಗನಲ್ಲಿ 4 ಬ್ಯಾಕ್-ಟು-ಬ್ಯಾಕ್ ಸಿಕ್ಸರ್‍ಗಳನ್ನು ಹೊಡೆದದ್ದು. ಅಲ್ಲದೇ ಅದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡ 2016ರ ಟಿ20 ವಿಶ್ವಕಪ್ ಸಹ ಗೆದ್ದಿತ್ತು.

ಬ್ರಾಥ್‍ವೈಟ್ ಅವರು ತಮ್ಮ ಮಗಳ ಆಗಮನವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಮಗಳಿಗೆ ತಮ್ಮ ಕ್ರಿಕೆಟ್ ವೃತ್ತಿಜೀವನದ ಅತ್ಯಂತ ಸ್ಮರಣೀಯ ಸ್ಥಳವಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನ ಹೆಸರಿಟ್ಟು ಭಾರತದ ಮೇಲೆ ಅವರಿಗಿರುವ ಗೌರವ, ಪ್ರೀತಿ, ವಿಶ್ವಾಸವನ್ನು ತೊರಿದ್ದಾರೆ.

ಫೆ.6 ರಂದು ಈಡನ್ ರೋಸ್ ಬ್ರಾಥ್‍ವೈಟ್ ಎಂಬ ಹೆಸರಿನ ಪುಟ್ಟ ಮಗುವಿನ ಆಗಮನವಾಗಿದೆ. ಆ ಮಗುವಿನ ತಂದೆಯು ಮಗುವಿನ ಆಗಮನಕ್ಕೆ ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದನು. ಮಗಳೇ ಈ ಡ್ಯಾಡಿ ನಿನ್ನನ್ನು ತುಂಬು ಹೃದಯದಿಂದ ಪ್ರೀತಿಸುವುದಾಗಿ ಭರವಸೆ ನೀಡುತ್ತಾನೆ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ.

ನನ್ನ ಹೆಂಡತಿ ತುಂಬಾ ಬಲಶಾಲಿ ಹಾಗೂ ಅವಳು ಬೇಗನೆ ಚೇತರಿಸಿಕೊಳ್ಳುತ್ತಾಳೆ. ಅವಳು ನನ್ನ ಮಗುವಿಗೆ ಒಳ್ಳೆಯ ತಾಯಿಯಾಗಿದ್ದಾಳೆ ಎಂದು ಬ್ರಾಥ್‍ವೈಟ್ ತಮ್ಮ ಹೆಂಡತಿಯನ್ನು ಸಹ ಹೊಗಳಿದ್ದಾರೆ.