ಕಾಮದ ಮದದಲ್ಲಿ ಪತಿಗೆ ದೋಖಾ !! ಪರಪುರುಷನ ಸಂಗ ಬಯಸಿದ ಪತ್ನಿ ಸುಪಾರಿ ಕೊಟ್ಟು ಪತಿಯ ಕೊಲ್ಲಿಸಿದಳು

Share the Article

ಸಂಜೆ ಶಾಲೆಯಿಂದ ಮಗನನ್ನು ಕರೆತರಲೆಂದು ಬೈಕ್ ನಲ್ಲಿ ಹೋಗಿದ್ದ ವ್ಯಕ್ತಿಯನ್ನು ಕಾವಲು ಹೊಸೂರು ಗೇಟ್ ಬಳಿ ಅಡ್ಡಗಟ್ಟಿದ ಅಪರಿಚಿತರು ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದರು. ಈ ಘಟನೆ ಜನವರಿ 31 ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ‌ನಡೆದಿತ್ತು.

ಮೃತ ವ್ಯಕ್ತಿ ಆನಂದ ಕುಮಾರ್ ( 42) ಎಂದು ಗುರುತಿಸಲಾಗಿದೆ.

ಈ ಕೊಲೆ ಪ್ರಕರಣವನ್ನು ಭೇದಿಸಿರುವ ನುಗ್ಗೇಹಳ್ಳಿ ಪೊಲೀಸರು ಮೃತ ವ್ಯಕ್ತಿಯ ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಿದ್ದಾರೆ.

ಆನಂದ್ ಕುಮಾರ್ ಪತ್ನಿ ನುಗ್ಗೆಹಳ್ಳಿಯಲ್ಲಿ ಯೋಗ ಕ್ಲಾಸ್ ನಡೆಸುತ್ತಿದ್ದ ನವೀನ್ ಜೊತೆಗೆ ಅಕ್ರಮ ಸಂಬಂಧ ಇತ್ತು. ಈ ವಿಚಾರ ಗಂಡನಿಗೆ ಗೊತ್ತಾದರೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದು ಗಂಡನನ್ನು ಕೊಲೆ ಮಾಡಿಸಿದ್ದಾಳೆ.

ಬೆಂಗಳೂರಿನವರು ಸುಪಾರಿ ಪಡೆದು ಕೊಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಈಕೆಯ ಪ್ರಿಯಕರ ನವೀನ್ ಸಾಥ್ ಕೊಟ್ಟಿದ್ದಾನೆ.

ಸುಪಾರಿ ಪಡೆದು ಹತ್ಯೆ ಮಾಡಿದ ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Leave A Reply