ಹಿಜಾಬ್ ಪ್ರಕರಣ | ಹೈಕೋರ್ಟ್ ನಿಂದ ಮಹತ್ವದ ಸೂಚನೆ | ಹಿಜಾಬ್ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಿದ ಹೈಕೋರ್ಟ್
ಹಿಜಾಬ್ ವಿವಾದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು ನಿನ್ನೆ ಮೊದಲ ದಿನ ಸುದೀರ್ಘ ವಿಚಾರಣೆ ನಡೆದಿದೆ. ಇಂದು ಅದರ ವಿಚಾರಣೆಯನ್ನು ಮುಂದೂಡಿತ್ತು. ಹೈಕೋರ್ಟ್.
ಇಂದು ಮಧ್ಯಾಹ್ನ 2.30 ಕ್ಕೆ ಮರುವಿಚಾರಣೆ ಪ್ರಾರಂಭಿಸಿದ ಹೈಕೋರ್ಟ್ ವಾದ ವಿವಾದವನ್ನು ಆಲಿಸಿದ ನಂತರ ವಿಸ್ತ್ರತ ಪೀಠ ನ್ಯಾಯಮೂರ್ತಿಗಳಿಗೆ ಪ್ರಕರಣ ವರ್ಗಾಯಿಸಲಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ಎಜೆಗೆ ವರ್ಗಾವಣೆ
ಇಂದು ಕೋರ್ಟ್ ನಲ್ಲಿ ನಡೆದ ವಾದ ವಿವಾದದ ಫುಟ್ ಡಿಟೇಲ್ಸ್ ಇಲ್ಲಿದೆ
ನಿನ್ನೆ ನಡೆದ ವಾದ ಮಾಡಿದ ಅಂಶಗಳ ಬಗ್ಗೆ ದಾಖಲೆಗಳ ಬಗ್ಗೆ ಪರಿಶೀಲಿಸಿದ್ದೇನೆ. ಈ ಪ್ರಕರಣವನ್ನು ವಿಸ್ತ್ರತ ಪೀಠಕ್ಕೆ ವಹಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅಭಿಪ್ರಾಯ ಪಟ್ಟಿದ್ದಾರೆ.
ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ ಹೆಗಡೆ ವಾದ ಮಂಡಿಸುತ್ತಾ ಶೈಕ್ಷಣಿಕ ವರ್ಷ ಮುಗಿಯೋಕೆ ಇನ್ನು ಎರಡು ತಿಂಗಳು ಬಾಕಿ ಇದೆ ಅಲ್ಲಿಯವರೆಗೆ ಹಿಜಾಬ್ ಧರಿಸೋಕೆ ಅವಕಾಶ ಮಾಡಿ ಕೊಡಿ. ಇದು ನನ್ನ ಸ್ವಂತ ಊರು, ಮತ್ತು ನನ್ನ ಕಾಲೇಜಿನ ಪ್ರಕರಣ ಇದಾಗಿದೆ. ಈ ಪ್ರಕರಣದ ಸಮಸ್ಯೆ ಬಗೆಹರಿಯಬೇಕು. ಈಗ ಮುಖ್ಯವಾಗಿ ಶಾಂತಿ ಮರುಸ್ಥಾಪಿಸಬೇಕು. ಯಾವುದಾದರೂ ಪರಿಹಾರ ಕಂಡುಕೊಂಡರೆ ಸ್ವರ್ಗವೇನೂ ಭೂಮಿಗೆ ಬಂದು ಬೀಳಲ್ಲ. ವಿದ್ಯಾರ್ಥಿಗಳು ಮತ್ತೆ ವಾಪಾಸ್ ಕಾಲೇಜಿಗೆ ಹೋಗಲಿ. ಪರಿಸ್ಥಿತಿ ಬೇಗನೆ ಶಾಂತವಾಗಲಿ. ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಸರಕಾರಕ್ಕೆ ಸಮವಸ್ತ್ರ ಹೇಳಿಕೆಯ ಅಧಿಕಾರ ಇಲ್ಲ. ವಿಸ್ತ್ರತ ಪೀಠಕ್ಕೆ ಹೋಗೋ ಮೊದಲು ಮಧ್ಯಂತರ ಆದೇಶ ನೀಡುವಂತೆ ಮನವಿ ಮಾಡುತ್ತಾರೆ ಅರ್ಜಿದಾರರ ಪರ ವಕೀಲರು.
ಸರಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ವಿಸ್ತ್ರತ ಪೀಠಕ್ಕೆ ವಹಿಸುವುದನ್ನು ನ್ಯಾಯಮೂರ್ತಿ ತೀರ್ಮಾನಿಸಲಿ. ನಮಗೆ ಬೇಗ ತೀರ್ಪು ಬರುವುದು ಅಗತ್ಯ. ಜನ ಈ ತೀರ್ಪಿಗಾಗಿ ಎದುರು ನೋಡ್ತಾ ಇದ್ದಾರೆ. ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆ , ರಾಜ್ಯ ಸರಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಿಲ್ಲ. ಹಿಜಾಬ್ ಕಡ್ಡಾಯ ಅನ್ನುವುದಕ್ಕೆ ಸಮರ್ಥ ಆಧಾರಗಳಿಲ್ಲ. ಸರಕಾರದ ಆದೇಶದ ಮೂಲಕ ಅಧಿಕಾರವನ್ನು ನೀಡಲಾಗಿದೆ ಈ ಹಂತದಲ್ಲಿ ಮಧ್ಯಂತರ ಆದೇಶ ನೀಡುವುದು ಸರಿಯಲ್ಲ ಒಂದು ವೇಳೆ ನೀಡಿದರೆ ಅರ್ಜಿದಾರರ ಪರವಾಗಿ ಆದೇಶ ನೀಡಿದಂತಾಗುತ್ತದೆ ಎಂದು ಹೇಳುತ್ತಾರೆ
ಅರ್ಜಿದಾರರ ಪರ ಇನ್ನೊಬ್ಬ ವಕೀಲ ದೇವದತ್ತ ಕಾಮತ್ ಅವರು, ನ್ಯಾಯಾಂಗದ ಸೂಕ್ಷ್ಮತೆಯನ್ನು ನಾವು ಪರಿಗಣಿಸುತ್ತೇವೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಆದರೆ ವಿದ್ಯಾರ್ಥಿಗಳಿಗೆ ನಂಬಿಕೆ ಆಚರಿಸಲು ಬಿಡಿ, ನ್ಯಾಯಮೂರ್ತಿಗಳು ವಿಸ್ತ್ರಪೀಠಕ್ಕೆ ವಹಿಸಲಿ ಎಂದು ಹೇಳುತ್ತಾರೆ.
ಕಾಲೇಜ್ ಮ್ಯಾನೇಜ್ಮೆಂಟ್ ಸಮಿತಿಯ ಪರವಾಗಿ ಸಜ್ಜನ್ ಪೂವಯ್ಯ ಅವರು ವಾದವನ್ನು ಮಂಡಿಸುತ್ತಾ, ಅರ್ಜಿದಾರರ ವಾದಕ್ಕೆ ಪ್ರಾಥಮಿಕ ಅರ್ಹತೆ ಇಲ್ಲ. ಶಿಕ್ಷಣ ಕಾಯ್ದೆಯಡಿ ಸಮವಸ್ತ್ರದ ಬಗ್ಗೆ ನಿಯಮ ರೂಪಿಸಲಾಗಿದೆ. ಎಲ್ಲರನ್ನೂ ಕೇಳಿ ನಿರ್ಣಯ ಮಾಡಲಾಗಿದೆ. ಈ ಯುವತಿಯರು ಕೂಡಾ ಸಮವಸ್ತ್ರವನ್ನು ಧರಿಸ್ತಾ ಇದ್ದರು. ಆದರೆ ದಿಢೀರನೆ ಈಗ ಹಿಜಾಬ್ ವಿಷಯ ಬಂದಿದೆ. ಸಮವಸ್ತ್ರದ ಬಗ್ಗೆ ತಕರಾರು ಬಂದಿದೆ ಎಂದು ಹೇಳುತ್ತಾರೆ.
ವಕೀಲರಿಂದ ಕೋರ್ಟ್ ನಲ್ಲಿ ಹಿಜಾಬ್ ಪರ ವಿರೋಧದ ಮಾತಿನ ಚಕಮಕಿ ನಡೆಯುತ್ತದೆ.