ಮಂಡ್ಯ ಒಂದೇ ಕುಟುಂಬದ ಐವರ ಸಾಮೂಹಿಕ ಹತ್ಯೆ ಪ್ರಕರಣ| ತಂಗಿ ಗಂಡನ ವ್ಯಾಮೋಹಕ್ಕೆ ಬಿದ್ದು ಮಾರಣಹೋಮ ನಡೆಸೇ ಬಿಟ್ಟಳು ಹಂತಕಿ|

ಮಂಡ್ಯ : ಸಕ್ಕರೆ ನಾಡು ಮಂಡ್ಯವನ್ನೇ ಬೆಚ್ಚಿಬೀಳಿಸಿದ ಐವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

 

ದೊಡ್ಡಪ್ಪನ ಮಗಳಿಂದಲೇ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ತಂಗಿಯ ಗಂಡನ ವ್ಯಾಮೋಹ ಆಕೆಯನ್ನು ಈ ಕೊಲೆ ಮಾಡಲು ಪ್ರೇರೇಪಿಸಿದೆ.

ಆರೋಪಿ ಲಕ್ಷ್ಮಿಗೆ ( 30) ಹಾಗೂ ಕೊಲೆಯಾದ ಲಕ್ಷ್ಮಿ ( 26) ಯ ಗಂಡನ ಜೊತೆ ವಿವಾಹೇತರ ಸಂಬಂಧವಿತ್ತು. ಮದುವೆಯಾಗಿ ಎರಡು ಮಕ್ಕಳಿದ್ದರೂ ಪರ ಪುರುಷನ ವ್ಯಾಮೋಹ ಇಡೀ ಕುಟುಂಬವನ್ನು ಬಲಿತೆಗೆದುಕೊಂಡಿತು. ಈಕೆಯ ಈ ಅಕ್ರಮ ಸಂಬಂಧ 6 ತಿಂಗಳ ಹಿಂದೆ ಶುರುವಾಗಿತ್ತು. ಹೆಂಡತಿಗೆ ಈ ವಿಷಯ ತಿಳಿದ ನಂತರ ಗಂಗಾರಾಮ್ ಈ ಅಕ್ರಮ ಸಂಬಂಧ ಬಿಟ್ಟಿದ್ದ. ಆದರೆ ಹೆಂಡತಿಯನ್ನು ಬಿಟ್ಟು ನನ್ನನ್ನು ಮದುವೆಯಾಗು ಎಂದು ಗಂಗಾರಾಮ್ ನನ್ನು ಆರೋಪಿ ಪೀಡಿಸುತ್ತಿದ್ದಳಂತೆ.

ಗಂಗಾರಾಮ್ ವ್ಯಾಪಾರಕ್ಕೆ ತೆರಳಿದ ಸಂದರ್ಭದಲ್ಲಿ ಈ ತನ್ನ ತಂಗಿಯ ಕುಟುಂಬದ ಕೊಲೆಗೆ ಪ್ಲ್ಯಾನ್ ಮಾಡಿದ್ದಳು. ನಿನ್ನ ಜೊತೆ ಮಾತನಾಡಬೇಕೆಂದು ಘಟನೆ ನಡೆದ ದಿನ ರಾತ್ರಿ‌ 9 ಗಂಟೆಗೆ ತಂಗಿಯ ಮನೆಗೆ ಬಂದಿದ್ದ ಹಂತಕಿ, ಮಧ್ಯರಾತ್ರಿ ಭೀಕರ ಕೊಲೆ ಮಾಡಿದ್ದಾಳೆ. ತಂಗಿ ಹಾಗೂ ಮಲಗಿದ್ದ ಮಕ್ಕಳನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದಿದ್ದಾಳೆ. ಕೊಲೆ ಮಾಡಿದ ಮೇಲೂ ಮೂರ್ನಾಲ್ಕು ಗಂಟೆ ಶವದ ಜೊತೆಗೇನೇ ಇದ್ದು, ನಂತರ ಮೈಸೂರಿನ ತನ್ನ ಮನೆಗೆ ಹೋಗಿದ್ದಳು.

ನಂತರ ಮರುದಿನ ಬೆಳಿಗ್ಗೆ 10 ಗಂಟೆಗೆ ಬಂದು ಶವದ ಮುಂದೆ ಅಮಾಯಕಿಯಂತೆ ಕಣ್ಣೀರಾಕಿದ್ದಾಳೆ. ಐವರ ಕೊಲೆ ಒಂದೇ ದಿನ ಒಂದೇ ಮನೆಯಲ್ಲಿ ನಡೆದದ್ದನ್ನು ತಿಳಿದು ಜನ ಬೆಚ್ಚಿಬಿದ್ದಿದ್ದರು.

ಕೊಲೆಗೆ ಕಾರಣದ ಸತ್ಯಾಂಶ ತಿಳಿದ ಪೊಲೀಸರು ಕೂಡಾ ಶಾಕ್ ಆಗಿದ್ದಾರೆ.

Leave A Reply

Your email address will not be published.