ಮಂಗಳೂರು:ಮಧ್ಯರಾತ್ರಿ ಎಟಿಎಂ ಕಳವಿಗೆ ಯತ್ನ!! ಮಂಗಳೂರು ಪೊಲೀಸರ ಕಾರ್ಯಾಚರಣೆ- ಆರೋಪಿ ರೆಡ್ ಹಾಂಡ್ ಆಗಿ ಬಲೆಗೆ

Share the Article

ಮಂಗಳೂರು:ಹೊರವಲಯದ ತೊಕ್ಕೊಟ್ಟು ಎಂಬಲ್ಲಿ ಎಟಿಎಂ ಕಳವಿಗೆ ಯತ್ನಿಸುತ್ತಿದ್ದ ಕಳ್ಳನೊಬ್ಬನನ್ನು ಮಂಗಳೂರು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಬಚ್ಚನಲ್ಲಿಯ ಬೀರಪ್ಪ ಎಂದು ಗುರುತಿಸಲಾಗಿದ್ದು, ಈತ ನಿನ್ನೆ ರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ ಎಟಿಎಂ ನಿಂದ ಕಳವಿಗೆ ಯತ್ನಿಸುತ್ತಿದ್ದ ಎನ್ನಲಾಗಿದೆ.

ಕಳವು ನಡೆಸಲು ಯತ್ನಿಸುತ್ತಿದ್ದ ವಿಚಾರ ಸರ್ವಿಲೆನ್ಸ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು,ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಕಳ್ಳನನ್ನು ಹೆಡೆಮುರಿಕಟ್ಟಿದ್ದಾರೆ.

Leave A Reply