ಯುವಶಕ್ತಿ ಸೇವಾ ಪಥದ ಮೊದಲ ಸೇವಾ ಹೆಜ್ಜೆ!! ಮೆಚ್ಚಿ ಜಾತ್ರೆಯಲ್ಲಿ ಅಂಧ ಕಲಾವಿದರಿಗೆ ಬೆಳಕು ನೀಡುವ ನಿಧಿ ಸಂಗ್ರಹ ಕಾರ್ಯ ಸಂಪನ್ನ!!

Share the Article

ಪರೋಪಕಾರಾರ್ಥಂ ಇದಂ ಶರೀರಂ ಎಂಬ ಧ್ಯೇಯವಾಕ್ಯದೊಂದಿಗೆ ಸೇವಾಕಾರ್ಯಕ್ಕಾಗಿ ಆರಂಭಗೊಂಡಿರುವ ಯುವಶಕ್ತಿ ಸೇವಾಪಥದ ಮೊದಲ ಸೇವಾಹೆಜ್ಜೆ ಮಾಣಿ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆಯಲ್ಲಿ ಸಂಪನ್ನಗೊಂಡಿತು.

ಮಂಗಳೂರಿನಲ್ಲಿ ನೆಲೆಸಿರುವ ಅಂಧಕಲಾವಿದರಾದ ಶಾರದಾ ಕಲಾವೃಂದ ಶೃಂಗೇರಿಯ ಕಲಾವಿದರಿಗಾಗಿ ಹಮ್ಮಿಕೊಂಡಿದ್ದ ಸೇವಾಯೋಜನೆಯಲ್ಲಿ ಯುವಶಕ್ತಿ ಕಡೇಶಿವಾಲಯ(ರಿ),ಯುವಸ್ಪಂದನ ಪೆರ್ನೆ,ಯುವಕೇಸರಿ ಗಡಿಯಾರ,ಯುವವೇದಿಕೆ ಪೆರಾಜೆ(ರಿ),ಶ್ರೀಶಾರದಾ ಯುವವೇದಿಕೆ(ರಿ) ಮಾಣಿ ಸಂಘಟನೆಗಳ ಕಾರ್ಯಕರ್ತರು ಸ್ವಯಂಸೇವಕರಾಗಿ ಭಾಗವಹಿಸಿದ್ದರು.

ಸಹೃದಯಿ ದಾನಿಗಳ ನೆರವಿನಿಂದ ರೂ 61,995 ರೂ ಮೊತ್ತ ಸಂಗ್ರಹವಾಗಿದ್ದು ದೈವಸ್ಥಾ‌ನದ ಮುಂಭಾಗದಲ್ಲಿ ಮಾಣಿಗುತ್ತು ಸಚಿನ್ ರೈಗಳು ಅಂಧಕಲಾವಿದರಿಗೆ ನಿಧಿ ಹಸ್ತಾಂತರಿಸಿದರು.

Leave A Reply