ಕೊಡಿಂಬಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ | ಹಲವು ಗಣ್ಯರು ಭಾಗಿ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಕಡಬ ವಲಯದ ಕೊಡಿಂಬಾಳ ದಲ್ಲಿ ಸಿ ಯಸ್ ಸಿ ಕೇಂದ್ರವು ಉದ್ಘಾಟನೆ ಗೊಂಡಿತು.
ತಾಲೂಕು ಪಂಚಾಯತ್ ಮಾಜಿ ಅಧ್ಶಕ್ಷರಾದ ಫಜಲ್ ರವರು ಸಿ ಯಸ್ ಸಿ ಕೇಂದ್ರವನ್ನು ಉಧ್ಘಾಟಿಸಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಸಮಾಜದ ಕಟ್ಟಕಡೆಗಿನ ವ್ಶಕ್ತಿಗೂ ಸರಕಾರದ ಸೌಲಭ್ಶಗಳು ದೊರೆಯುವಂತೆ ಮಾಡುವ ಪೂಜ್ಶ ಹೆಗ್ಗಡೆಯವರ ದೂರದೃಷ್ಟಿತ್ವ ದ ಸಿ ಯಸ್ ಸಿ ಕಾರ್ಯಕ್ರಮ ವು ನಮ್ಮ ಊರಿನಲ್ಲಿ ಪ್ರಾರಂಭ ಮಾಡಿರುವುದು ನಮಗೆಲ್ಲ ಸಂತೋಷವಾಗಿದೆ ಇದರ ಪ್ರಯೋಜನವನ್ನು ಗ್ರಾಮದ ಸಾರ್ವಜನಿಕರು ಪಡೆದುಕೊಳ್ಳುವಂತೆ ಶುಭಹಾರೈಸಿದರು.
ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಪ್ರಾಸ್ತಾವಿಕ ವಾಗಿ ಮಾತನಾಡಿದರು ಕಾರ್ಯಕ್ರಮದ ಅಧ್ಶಕ್ಷತೆಯನ್ನು ಕೊಡಿಂಬಾಳ ಬಿ ಒಕ್ಕೂಟದ ಅಧ್ಶಕ್ಷರಾದ ಕುಸುಮ ವಹಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕಟ್ಟಡದ ಮಾಲಿಕರಾದ ಪ್ರದೀಪ್ ˌ ಜನಜಾಗೃತಿ ಸದಸ್ಶ ರಘುರಾಮ ˌ ಕೊಡಿಂಬಾಳ ಒಕ್ಕೂಟದ ಅಧ್ಶಕ್ಷೆ ರಜಿಯಾ ಉಪಸ್ಥಿತರಿದ್ದರು. ಸಿ ಯಸ್ ಸಿ ನಿರ್ವಾಹಕಿ ಕುಮಾರಿ ಭಾರತಿಯವರಿಗೆ ಲ್ಶಾಪ್ ಟೇಪ್ ವಿತರಿಸಲಾಯಿತು. ಸೇವಾಪ್ರತಿನಿಧಿ ನಳಿನಿ ಸ್ವಾಗತಿಸಿ ನೇತ್ರ ಧನ್ಶವಾದವಿತ್ತರು. ಸಿ ಯಸ್ ಸಿ ನಿರ್ವಾಹಕಿ ದೀಕ್ಷಿತಾ ಹಾಗೂ ಒಕ್ಕೂಟದ ಪಧಾದಿಕಾರಿಗಳು ಉಪಸ್ಥಿತರಿದ್ದರು. ಬಿಳಿನೆಲೆ ವಲಯ ಮೇಲ್ವೀಚಾರಕ ಆದರ್ಶ್ ಕಾರ್ಯಕ್ರಮ ನಿರ್ವಹಿಸಿದರು.
ಕಟ್ಟಡದ ಮಾಲಿಕರು ಹಾಗೂ ತೆಗ್ರ್ ತುಳು ಅಕೆಡಮಿಯ ಸಂಚಾಲಕರಾದ ಉಮೇಶ್ ಶಾಯಿರಾಂ ನೂಜಿಬಾಳ್ತಿಲ ಒಕ್ಕೂಟದ ಅಧ್ಶಕ್ಷರಾದ ಪುರುಶೋತ್ತಮ ಮಿತ್ತಂಡೇಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸುಗುಣ ಸ್ವಾಗತಿಸಿ ಗೀತಾ ಧನ್ಶವಾದ ಮಾಡಿದರು. ಕಡಬ ತಾಲೂಕಿನ ಹಣಕಾಸು ಪ್ರಭಂಧಕಿ ಸುಜಾತ ಸಿ ಯಸ್ ಸಿ ತಾಲೂಕು ಸಂಚಾಲಕ ಚಿತ್ರೇಶ್ ˌ ಸಿ ಯಸ್ ಸಿ ಗ್ರಾಮ ನಿರ್ವಾಹಕಿ ಕುಮಾರಿ ಅಂಕಿತಾ ಮತ್ತುಒಕ್ಕೂಟದ ಪಧಾದಿಕಾರಿಗಳು ಸ್ವಸಹಾಯಸಂಘದ ಸದಸ್ಶರು ಉಪಸ್ಥಿತರಿದ್ದರು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿದರು.