ಸರಕಾರಿ ನೌಕರರೇ, ಇನ್ನು ಮುಂದೆ ಕಚೇರಿಗೆ ತರುವ ನಗದಿನ ಮೇಲೆ ನಿಗಾ!!!ನಗದು ಘೋಷಣೆ ಕಡ್ಡಾಯ!

ಬೆಂಗಳೂರು : ಸರಕಾರಿ ಇಲಾಖೆಯಲ್ಲಿ ಸರಕಾರಿ ನೌಕರರು ಮನೆಗೆ ಹೋಗುವಾಗ ಜೇಬು ತುಂಬಿಸಿಕೊಂಡು ಹೋಗುತ್ತಾರೆ ಎಂಬ ಅಪವಾದಗಳು ಹೆಚ್ಚು. ಇಂತಹ ಸಾರ್ವಜನಿಕ ಆರೋಪಗಳ ಹಿನ್ನೆಲೆಯಲ್ಲಿ ಸರಕಾರ ನೌಕರರ ಜೇಬಿನ ಮೇಲೆ ನಿಗಾ ಇಡಲು ಮುಂದಾಗಿದೆ.

ಸರಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ನೌಕರನ ವೈಯಕ್ತಿಕ ನಗದನ್ನು ಗಮನಿಸಲು ಸರಕಾರ ಸುತ್ತೋಲೆ ಹೊರಡಿಸಿದೆ.

ನೌಕರರು ತಾವು ಕಚೇರಿಗೆ ತಂದ ಹಣವನ್ನು ದಾಖಲಿಸಲು ಕಡ್ಡಾಯ ಮಾಡಿದೆ. ಕಚೇರಿಯ ಮುಖ್ಯಸ್ಥರು ಈ ನಗದನ್ನು ನಿರ್ವಹಿಸಲಿದ್ದಾರೆ.

ಸರಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ನೌಕರನ ವೈಯಕ್ತಿಕ ನಗದನ್ನು ಗಮನಿಸಲು ಪ್ರತಿ ಕೆಲಸದ ದಿನದಲ್ಲಿ ನಗದು ಎಷ್ಟು ಇದೆ ಎಂದು ನಮೂದಿಸಬೇಕು.

ನೌಕರರ ಅಧಿಕೃತ ಸಹಿ ಹಾಜರಾತಿ / ಎಎಂಎಸ್ ನಲ್ಲಿ ಕೆಲಸದ ದಿನದಂದು ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ ಅವನು/ ಅವಳು ಕಚೇರಿಗೆ ತಂದ ನಗದು ಮೊತ್ತವನ್ನು ರಿಜಿಸ್ಟರ್ ನಲ್ಲಿ ತನ್ನ ಸಹಿಯೊಂದಿಗೆ ಘೋಷಿಸತಕ್ಕದ್ದು.

ಹೆಚ್ಚು ಹಣ ಇದ್ದರೆ ಅಕ್ರಮ. ಯಾವುದೇ ನೌಕರರು ನಗದು ಘೋಷಣೆ ಮಾಡಿದ್ದಕ್ಕಿಂತ ಹೆಚ್ಚುವರಿ ಹಣ ಹೊಂದಿರುವುದು ಕಂಡು ಬಂದರೆ ಆ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ. ಆ ಹಣವನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ನೌಕರರ ಹೊಣೆಯಾಗಿದೆ.

ನಗದು ಘೋಷಣೆಯನ್ನು ಕಚೇರಿ ವೇಳೆಯ ಎಲ್ಲ ಸಮಯದಲ್ಲಿ ಯಾವುದೇ ಉನ್ನತ/ ಸಕ್ಷಮ ಪ್ರಾಧಿಕಾರ/ ಘಟಕದ ಮುಖ್ಯಸ್ಥರು/ ವಿಭಾಗದ ಮುಖ್ಯಸ್ಥರ ತಪಾಸಣೆಗೆ ತೆರೆದಿಡತಕ್ಕದ್ದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Leave A Reply

Your email address will not be published.