ಹಿಜಾಬ್ ಪ್ರಕರಣಕ್ಕೆ ಹೊಸ ತಿರುವು : ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಬಲ ಸೂಚಿಸಲು ಹೈದರಾಬಾದ್ ಮುಸ್ಲಿಮರ ಆಗಮನ

Share the Article

ಉಡುಪಿ : ಕೇಸರಿ ಹಿಜಾಬ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ ವಿನಃ ಕಡಿಮೆಯಾಗುತ್ತಿಲ್ಲ. ಈತನ್ಮಧ್ಯೆ ಈ ಪ್ರಕರಣಕ್ಕೆ ಈಗ ಹೈದರಾಬಾದ್ ಮಸ್ಲಿಮರ ಪ್ರವೇಶವಾಗಿದೆ.

ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ಕೊಡಬೇಕು ಎಂದು ಮುಸ್ಲಿಂ ಯುವತಿಯರು ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯಾಗಿ ಹಿಂದೂ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಆಗಮಿಸುವ ಪಣ ತೊಟ್ಟಿದ್ದಾರೆ. ಇಷ್ಟೆಲ್ಲದರ ಮಧ್ಯೆ ಈಗ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಹೋರಾಟಕ್ಕೆ ಬೆಂಬಲ ಸೂಚಿಸಿ ಹೈದರಾಬಾದ್ ಮುಸ್ಲಿಮರ ಎಂಟ್ರಿಯಾಗಿದೆ.

ಸಲ್ಮಾನ್ ಎಂಬಾತನ ನೇತೃತ್ವದಲ್ಲಿ ಈ ತಂಡ ಹೈದರಾಬಾದ್ ನಿಂದ ಕುಂದಾಪುರಕ್ಕೆ ಬಂದಿದೆ. ರಾಜ್ಯ ಸರಕಾರ ಮುಸ್ಲಿಮರಿಗೆ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಿದ್ದಾರೆ. ಸರಕಾರಿ ಶಾಲೆಗಳು ನಮ್ಮ ತೆರಿಗೆ ದುಡ್ಡಿನಿಂದ ನಡೆಯುವುದು. ನಮ್ಮ‌ ಭಾವನೆಗಳಿಗೆ ಕೂಡಾ ಬೆಲೆ ಕೊಡಬೇಕು ಎಂದು ಹೇಳಿದ್ದಾರೆ.

Leave A Reply