ಮಹಿಳೆಯರ ಆತ್ಮರಕ್ಷಣೆಯ ಜೊತೆಗೆ ಗೌರವ ರಕ್ಷಣೆಯನ್ನು ಮಾಡಬೇಕು – ಸಿಎಂ ಬಸವರಾಜ ಬೊಮ್ಮಾಯಿ
ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಭಾನುವಾರ ಆಯೋಜಿಸಿದ್ದ ಓಬವ್ವ ಆತ್ಮರಕ್ಷಣಾ ಕಲೆಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿ ಎಂ ಬಸವರಾಜ ಬೊಮ್ಮಾಯಿಯವರು ‘ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ 50 ಸಾವಿರ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ’ ಎಂಬ ಮಾತನ್ನು ಹೇಳಿದ್ದಾರೆ. ಕರ್ನಾಟಕ ವಸತಿ ಶಾಲೆಗಳ ಮೂಲಕ ಉತ್ತಮ ಕಾರ್ಯಕ್ರಮವನ್ನು ರೂಪಿಸಲಾಗಿದೆ. ವರ್ಷವಿಡೀ ಈ ಕಾರ್ಯಕ್ರಮವನ್ನು ನಡೆಸಬೇಕು. ಕಾನೂನು, ಶಿಕ್ಷಣ, ಗೃಹ ಇಲಾಖೆಗಳು, ಸಮಾಜ, ಸರಕಾರ ಒಗ್ಗಟ್ಟಾಗಿ ಮಹಿಳೆಯರ ಆತ್ಮರಕ್ಷಣೆಯ ಜೊತೆಗೆ ಗೌರವ ರಕ್ಷಣೆಯನ್ನು ಮಾಡಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.
ಶಕ್ತಿಯ ಪ್ರತೀಕವೇ ಓಬವ್ವ. ಈ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ನಾಡು ಕನ್ನಡ ನಾಡು. ಕಿತ್ತೂರು ಚನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಒನಕೆ ಓಬವ್ವ ಅವರೆಲ್ಲರೂ ಪುರುಷರನ್ನು ಮೀರಿಸುವ ಶೌರ್ಯ ಹೊಂದಿದ್ದರು. ನಮ್ಮೆಲ್ಲರಿಗೂ ಬಹಳ ದೊಡ್ಡ ಸ್ಪೂರ್ತಿ ಮತ್ತು ಪ್ರೇರಣೆ. ಆರ್ಥಿಕ ಅಭಿವೃದ್ಧಿ ಎಷ್ಟು ಮುಖ್ಯವೋ, ಸ್ಪೂರ್ತಿಯೂ ಅಷ್ಟೇ ಮುಖ್ಯ. ಉತ್ತಮ