Home latest ಪ್ರಿಯಕರನ ಮದುವೆಯಾಗಲು ವಿವಾಹಿತೆ ಮಾಡಿದಳು ಖತರ್ ನಾಕ್ ಪ್ಲ್ಯಾನ್ !!!ಇದೊಂದು ಥ್ರಿಲ್ಲರ್ ಮರ್ಡರ್ ಮಿಸ್ಟರಿ !

ಪ್ರಿಯಕರನ ಮದುವೆಯಾಗಲು ವಿವಾಹಿತೆ ಮಾಡಿದಳು ಖತರ್ ನಾಕ್ ಪ್ಲ್ಯಾನ್ !!!ಇದೊಂದು ಥ್ರಿಲ್ಲರ್ ಮರ್ಡರ್ ಮಿಸ್ಟರಿ !

Hindu neighbor gifts plot of land

Hindu neighbour gifts land to Muslim journalist

ಪ್ರೀತಿಯ ಅಮಲಿನಲ್ಲಿ ಬಿದ್ದವರಿಗೆ ಕೆಲವೊಮ್ಮೆ ಏನು ಸರಿ ತಪ್ಪು ಎಂಬುದು ಗೊತ್ತಾಗುವುದಿಲ್ಲವಂತೆ‌. ಕೆಲವೊಂದು ಪ್ರೀತಿ ಪ್ರೇಮದ ಡೈಲಾಗ್ ಗಳನ್ನು ಕೇಳುತ್ತಲೇ ಪ್ರೇಮದ ಅಮಲಿನಲ್ಲಿ ತೇಲಾಡುವವರನ್ನು ಕೂಡಾ ನಾವು ನೋಡುತ್ತೇವೆ. ಇನ್ನೊಂದು ಕಡೆ‌ ಪ್ರೀತಿ ಅಮರ, ಮಧುರ, ತ್ಯಾಗ ಎಂದು ಅದರಲ್ಲೇ ಮಿಂದೇಳುವ ನೈಜ ಪ್ರೇಮಿಗಳು ಕೂಡಾ ಇದ್ದಾರೆ. ಆದರೆ ಇಲ್ಲೊಬ್ಬಳು ಪ್ರೇಮಿ ಇದ್ದಾಳೆ‌. ಈಕೆಯ ಪ್ರೀತಿ ಒಂಥರಾ ವಿಚಿತ್ರ. ಏಕೆಂದರೆ ಈಕೆ ಪ್ರೀತಿಯನ್ನು ಪಡೆಯಲು ಕೊಲೆ ಮಾಡಿದ್ದಾಳೆ. ಅದು ಕೂಡ ಪುಟ್ಟ ಬಾಲಕನನ್ನು. ಅದರಲ್ಲೂ ಈ ಪ್ರೇಮಿ ಯುವತಿ ವಿವಾಹಿತೆ ಕೂಡಾ ಆಗಿದ್ದಾಳೆ‌.

ಇಂಥದ್ದೊಂದು ಥ್ರಿಲ್ಲರ್ ಮರ್ಡರ್ ಮಿಸ್ಟರಿಯನ್ನು ಭೇದಿಸಿದ್ದು ರಾಜಸ್ಥಾನದ ಜೋಧ್ ಪುರದ ಪಿಪಾಡ್ ತಹಸಿಲ್ ನ ಪೊಲೀಸರು.

ಈ ಪ್ರಿಯತಮೆಯ ಹೆಸರು ರಾಜೂರಾಮ ದೇವಸಿ. ಆಕೆಗೂ ಅದೇ ಗ್ರಾಮದ ದಿನೇಶ್ ಗೂ ಪ್ರೀತಿ. ಆದರೆ ಕೆಲ ದಿನಗಳ ಹಿಂದೆ ದಿನೇಶ್ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧಾರ ಮಾಡಿದ್ದ. ದೇವಸಿ ಅದಾಗಲೇ ಮದುವೆಯಾಗಿರುವ ಕಾರಣ ಆಕೆಯನ್ನು ಮದುವೆಯಾಗುವ ನಿರ್ಧಾರ ಕೈ ಬಿಟ್ಟಿದ್ದ.

ಆದರೆ ದೇವಸಿಗೆ ಇದು ಇಷ್ಟ ಇರಲಿಲ್ಲ. ಆತ ಇನ್ನೊಬ್ಬಳನ್ನು ಮದುವೆ ಆಗುವುದನ್ನು ತಡೆಯುವುದಕ್ಕೋಸ್ಕರ ವಿಚಿತ್ರ ಪ್ಲ್ಯಾನ್ ಮಾಡುತ್ತಾಳೆ‌. ಮದುವೆ ನಿಲ್ಲಿಸಲು ಬೇಕಾದ ಪ್ಲ್ಯಾನ್ ಗಳನ್ನು ಮಾಡಲು ಪ್ರಾರಂಭಮಾಡುತ್ತಾಳೆ. ಅದರಂತೆ ಫೆ.12 ರಂದು ದಿನೇಶ್ ಮನೆಯಲ್ಲಿ ವಿವಾಹ ಪೂರ್ವ ಶುಭಕಾರ್ಯ ನಡೆಯ ಬೇಕಿತ್ತು. ಇದನ್ನರಿತ ದೇವಸಿ ತನ್ನ ಪ್ರಿಯಕರ ದಿನೇಶ್ ನ 12 ವರ್ಷದ ಸೋದರಳಿಯ ನರೇಶ್ ನನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಆಕೆ ಯಾಕೆ ಕರೆದುಕೊಂಡು ಬಂದಳು, ಅವಳ ಉದ್ದೇಶ ಏನಾಗಿತ್ತು ? ಇಲ್ಲಿದೆ ಸ್ವಾರಸ್ಯಕರ ವಿಷಯ. ಆಕೆ ಆ ಬಾಲಕನನ್ನು ಬರ್ಬರವಾಗಿ ಹತ್ಯೆಗೈದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಪಿಪಾಡ್ ತಹಸಿಲ್ ನ ಸಾಥಿಯೆನ್ ಗ್ರಾಮದ ನದಿಯ ಬಳಿ ಎಸೆದಿದ್ದಾಳೆ‌. ಇಲ್ಲೂ ಕೂಡಾ ಆಕೆ ಜಾಣ್ಮೆ ತೋರಿಸಿದ್ದಾಳೆ.

ಅದೇನೆಂದರೆ ಬಾಲಕನನ್ನು ಹತ್ಯೆಗೈದು ಚೀಲದಲ್ಲಿ ತುಂಬಿಸುವಾಗ ಬೇಗನೇ ಗೊತ್ತಾಗಲಿ ಅನ್ನೋ ಕಾರಣಕ್ಕೆ ಕಾಲುಗಳನ್ನು ಹೊರಗೆ ಹಾಕಿದ್ದಾಳೆ. ಇತ್ತ ಮದುವೆ ಸಂಭ್ರಮದಲ್ಲಿ ಮನೆಯವರು ನರೇಶ್ ಕಾಣುತ್ತಿಲ್ಲ ಎಂದು ಹುಡುಕಾಟ ಪ್ರಾರಂಭ ಮಾಡುತ್ತಾರೆ. ಈ ಸಂದರ್ಭದಲ್ಲಿ ನದಿಯಲ್ಲಿ ತೇಲುತ್ತಿದ್ದ ಮೃತದೇಹ ಪತ್ತೆಯಾಗಿದೆ. ಇದರಿಂದ ಮನೆಯವರೆಲ್ಲ ಆಘಾತಗೊಳ್ಳುತ್ತಾರೆ ಎಂದು ದೇವಸಿಗೆ ತಿಳಿದಿತ್ತು. ಹಾಗೆಯೇ ಮದುವೆ ಕ್ಯಾನ್ಸಲ್ ಆಗುತ್ತೆ ಅನ್ನೋದು ಕೂಡ ತಿಳಿದಿತ್ತು. ಈ ಸಂದರ್ಭಕ್ಕಾಗಿ ಹೊಂಚು ಹಾಕಿ ಕುಳಿತಿದ್ದಳು ದೇವಸಿ. ಆದರೆ ಈ ಕಥೆಯಲ್ಲಿ ನಡೆದದ್ದೇ ಬೇರೆ. ಏಕೆಂದರೆ ಬಾಲಕನ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ಕೈಗೊಳ್ಳುತ್ತಾರೆ. ಬಾಲಕ ನರೇಶ್ ಎಲ್ಲೆಲ್ಲಿ ಹೋಗಿದ್ದ ಎಂದು ಎಲ್ಲಾ ಮಾಹಿತಿ ಕಲೆ ಹಾಕಲಾಗುತ್ತದೆ. ಇತ್ತ ಕಡೆ ದೇವಸಿಯ ಪತಿ ಸಂತೋಷ್ ನರೇಶ್ ನನ್ನು ತನ್ನ ಪತ್ನಿ ಕರೆದುಕೊಂಡು ಬಂದಿದ್ದಳು ಎಂದು ಹೇಳಿದ್ದಾನೆ‌. ಈಗ ಪೊಲೀಸ್ ದೇವಸಿಯನ್ನು ವಿಚಾರಣೆ ಮಾಡುತ್ತಾರೆ.

ನಂತರ ಹೊರಬರುವುದೇ ಆಕೆಯ ಖರತ್ ನಾಕ್ ಪ್ಲ್ಯಾನ್ . ಬಾಲಕನನ್ನು ಕೊಂದಿರುವುದು ತಾನೇ ಎಂದು ಪೊಲೀಸರಲ್ಲಿ ಒಪ್ಪಿಕೊಳ್ಳುತ್ತಾಳೆ‌. ತನ್ನ ಪ್ರಿಯತಮನ ಮದುವೆಯನ್ನು ನಿಲ್ಲಿಸಲು ನಾನು ಈ ಕೃತ್ಯ ಮಾಡಿರುವುದಾಗಿ ಹೇಳಿದ್ದಾಳೆ.

ತನ್ನ ಪ್ರೀತಿಗೆ ಅಮಾಯಕ ಮಗು ವನ್ನು ಬಲಿ ತೆಗೆದುಕೊಂಡ ಈಕೆಯನ್ನು ಈಗ ಜೈಲಿಗೆ ಅಟ್ಟಲಾಗಿದೆ.