ಪಬ್ ನಲ್ಲಿ ಕನ್ನಡ ಹಾಡು ಹಾಕುವಂತೆ ಕೇಳಿದ್ದಕ್ಕೆ ಹಲ್ಲೆ ಮಾಡಿದ ಡಿಜೆ ಯುವಕ |ಕನ್ನಡ ಮಣ್ಣಲ್ಲೇ ಕನ್ನಡಕ್ಕೆ ಅವಮಾನ
ಬೆಂಗಳೂರು:ಕನ್ನಡ ಭಾಷೆಯನ್ನು ಉಳಿಸಬೇಕಾದ ಕನ್ನಡಿಗರೇ ಕನ್ನಡದ ಬೆಲೆಯನ್ನು ಅರಿಯದ ಸ್ಥಿತಿಗೆ ತಲುಪಿದ್ದಾರೆ.ಹೌದು. ಪಬ್ ಒಂದರಲ್ಲಿ ಕನ್ನಡಿಗರಲ್ಲಿಯೇ ‘ಕನ್ನಡ ಹಾಡು’ ಹಾಕಿ ಎಂದಿದ್ದಕ್ಕೆ ಹಲ್ಲೆ ಮಾಡಲಾದ ಘಟನೆ ನಡೆದಿದೆ.
ಕೋರಮಂಗಲ 80 ಫೀಟ್ ರಸ್ತೆಯಲ್ಲಿರುವ ಬದ್ಮಾಷ್ ಪಬ್ನಲ್ಲಿ ತಡರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಪಬ್ನ ಡಿಜೆ ಯುವಕ-ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ. ಪಬ್ ಡಿಜೆ ಸಿದ್ಧಾರ್ಥ್@ಅಪೋಸಿಟ್, ಸಮಿತಾ, ಆಕೆಯ ಸಹೋದರ ನಂದಕಿಶೋರ್ ಮೇಲೆ ಹಲ್ಲೆ ನಡೆಸಿದ್ದಾನೆ.
ಸಮಿತಾ ನಿನ್ನೆ ರಾತ್ರಿ ಬರ್ತ್ ಡೇ ಆಚರಿಸಲು ಪಬ್ಗೆ 15 ಮಂದಿ ಸ್ನೇಹಿತರ ಜೊತೆ ರಾತ್ರಿ 9ರ ಸುಮಾರಿಗೆ ಹೋಗಿದ್ದಾರೆ.ಕನ್ನಡ ಹಾಡು ಹಾಕುವಂತೆ ಡಿಜೆ ಬಳಿ ನಾಲ್ಕೈದು ಬಾರಿ ಕೇಳಿದ್ದಾರೆ. ಡಿಜೆಗಳು ತೆಲುಗು, ತಮಿಳು, ಹಿಂದಿ ಹಾಡು ಹಾಕಿದ್ದು, ಕನ್ನಡ ಹಾಡು ಹಾಕಲ್ಲ.ಬೇಕಿದ್ರೆ ಹೊರಗಡೆ ಹೋಗಿ ಎಂದು ಸಮಿತಾ, ನಂದಕಿಶೋರ್ ಕಾಲರ್ ಹಿಡಿದು ಡಿಜೆ ಅವಾಜ್ ಹಾಕಿದ್ದಾನೆ. ಈ ವೇಳೆ ಸಮಿತಾ ಮತ್ತು ಡಿಜೆ ಟೀಮ್ ನಡುವೆ ವಾಗ್ವಾದ ನಡೆದಿದ್ದು, ತಳ್ಳಾಡಿ ಹಲ್ಲೆ ಮಾಡಿದ್ದಾರೆಂದು ಸಮಿತಾ ಸ್ನೇಹಿತರ ಆರೋಪ ಮಾಡುತ್ತಿದ್ದಾರೆ.
ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಕನ್ನಡ ಹಾಡು ಕೇಳಿದ್ದಕ್ಕೆ ಕನ್ನಡ ನೆಲದಲ್ಲೇ ಹಲ್ಲೆಯಾಗಿರುವುದು ನಿಜಕ್ಕೂ ಅವಮಾನವೇ ಆಗಿದೆ.