ವಾಹನ ಸವಾರರೇ ನಿಮಗಾಗಿ ಗುಡ್ ನ್ಯೂಸ್ | ಇನ್ನು ಮುಂದೆ ಪೊಲೀಸರು ರಸ್ತೆಯಲ್ಲಿ ಸಾರ್ವಜನಿಕ ವಾಹನಗಳನ್ನು ನಿಲ್ಲಿಸುವುದಿಲ್ಲ | ಸಂಚಾರ ನಿಯಮ ಉಲ್ಲಂಘನೆ ದಂಡ ವಿಧಿಸಲು ಹೊಸ ಕ್ರಮ ಅಳವಡಿಸಿಕೊಂಡ ಇಲಾಖೆ!!!

ರಸ್ತೆಗಳಲ್ಲಿ ವಾಹನಗಳನ್ನು ತಡೆದು ಹಳೇ ಪ್ರಕರಣಗಳ ಪರಿಶೀಲನೆ ನಡೆಸುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿರುವುದರಿಂದ ಸಂಚಾರ ಪೊಲೀಸರು ರಸ್ತೆಗಳ ಬದಲು ಇನ್ಮುಂದೆ ಆರ್ ಟಿಒ ಕಚೇರಿ ಮುಂದೆ ಕಾರ್ಯಾಚರಣೆ ನಡೆಸಲಿದ್ದಾರೆ. ಈ ಹೊಸ ಮಾದರಿ ಅಳವಡಿಕೆಗೆ ಪೊಲೀಸ್ ಇಲಾಖೆ ತೀರ್ಮಾನಿಸಿದೆ.

ಇನ್ನು ಮುಂದೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಚಾಲಕಮತ್ತು ಸವಾರರಿಂದ ದಂಡ ವಸೂಲಿ ಮಾಡಲು ಸಂಚಾರ ಪೊಲೀಸರು ರಸ್ತೆಗಳ‌ ಬದಲು ಆರ್ ಟಿ ಒ ಕಚೇರಿ ಮುಂದೆ ಕಾರ್ಯಾಚರಣೆ ಮಾಡುತ್ತದೆ.

ಸಾರ್ವಜನಿಕರ ವಾಹನಗಳಿಗೆ ಅಡ್ಡ ಹಾಕೋಲ್ಲ. ಪ್ರತಿ ಆರ್ ಟಿ ಒ ಕಚೇರಿ ಮುಂದೆ ಎಸ್ ಐ, ಎಎಸ್ ಐ ಹಾಜರಾಗಿ ಡಿ ಎಲ್, ಫಿಟ್ನೆಸ್ ಸರ್ಟಿಫಿಕೇಟ್ , ವಾಹನ ನೋಂದಣಿ, ಡಿ ಎಲ್ ನವೀಕೃತ ಸೇರಿ ಇತರ ಕೆಲಸಕ್ಕೆ ಬರುವ ವಾಹನ ಸವಾರರ ಮತ್ತು ಚಾಲಕರು ಪಾವತಿಸಬೇಕಿರುವ ದಂಡವನ್ನು ವಸೂಲಿ ಮಾಡುವ ಯೋಜನೆ ಮಾಡಿದ್ದಾರೆ.

Leave A Reply

Your email address will not be published.