ವಿದ್ಯಾರ್ಥಿಗಳೇ ನಿಮಗಾಗಿ ಇಲ್ಲಿದೆ ಮುಖ್ಯವಾದ ಮಾಹಿತಿ‌ |ಫೆ. 7 ರಂದು ಐಸಿಎಸ್ಇ, ಐಎಸ್ಸಿ 10, 12 ನೇ ತರಗತಿ ಮೊದಲ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟ

ನವದೆಹಲಿ : 2021-22 ನೇ ಶೈಕ್ಷಣಿಕ ವರ್ಷದ 10 ನೇ ತರಗತಿ ಮತ್ತು 12 ನೇ ತರಗತಿಯ ಮೊದಲ ಸೆಮಿಸ್ಟರ್ ಫಲಿತಾಂಶಗಳನ್ನು ಫೆ.7 ರಂದು ಪ್ರಕಟಿಸಲಾಗುವುದು ಎಂದು ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಶುಕ್ರವಾರ ಪ್ರಕಟಿಸಿದೆ.

ಈ ಕುರಿತು ಶಿಕ್ಷಣ ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಹೊರಡಿಸಿದ್ದು, ಐಸಿಎಸ್ ಐ ಮತ್ತು ಐಎಸ್ಸಿ ಫಲಿತಾಂಶಗಳ ಮೊದಲ ಅವಧಿಯ ಫಲಿತಾಂಶಗಳು ಪೋರ್ಟಲ್ ನಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಹೊರಬರಲಿದೆ.

ಅಭ್ಯರ್ಥಿಗಳು ಎಸ್ ಎಂ ಎಸ್ ಮೂಲಕವೂ ತಮ್ಮ ಫಲಿತಾಂಶವನ್ನು ಪಡೆಯಬಹುದು.

ಆನ್ಲೈನ್ ನಲ್ಲಿ ನಿಮ್ಮ ಫಲಿತಾಂಶವನ್ನು ಹೇಗೆ ನೋಡುವುದು : ಅಭ್ಯರ್ಥಿಯು cise.org ವೆಬ್‌ಸೈಟ್‌ ಗೆ ಭೇಟಿ ನೀಡಬೇಕು ಅನಂತರ ಸೆಮಿಸ್ಟರ್ 1 ಬೋರ್ಡ್ ಫಲಿತಾಂಶಗಳು 2021-22 ಗಾಗಿ ಲಿಂಕ್ ಕ್ಲಿಕ್ ಮಾಡಬೇಕು. ನಂತರ ಅಪೇಕ್ಷಿತ ವರ್ಗವನ್ನು ಆಯ್ಕೆ ಮಾಡುವುದು ಅಂದರೆ ಐಸಿಎಸ್ ಇ ಅಥವಾ ಐಎಸ್ಸಿಯನ್ನು ಕ್ರಮವಾಗಿ 10 ನೇ ತರಗತಿ ಮತ್ತು 12 ನೇ ತರಗತಿಗೆ ಆಯ್ಕೆ ಮಾಡುವುದು. ನಂತರ ವಿದ್ಯಾರ್ಥಿಯು ತಮ್ಮ ವಿಶಿಷ್ಟ ಐಡಿ, ಇಂಡೆಕ್ಸ್ ನಂಬರನ್ನು ನಮೂದಿಸಬೇಕು. ಮತ್ತು ಫಲಿತಾಂಶವನ್ನು ಪ್ರವೇಶಿಸುವ ಸಮಯದಲ್ಲಿ ತೋರಿಸಲಾದ ಕ್ಯಾಪ್ಚಾ ಕೋಡ್ ನ್ನು ಭರ್ತಿ ಮಾಡಬೇಕು. ಆ ಬಳಿಕ ಫಲಿತಾಂಶವನ್ನು ನೋಡಬಹುದು.

Leave A Reply

Your email address will not be published.