Home Education ದ್ವಿತೀಯ ಪಿಯುಸಿ ಪಠ್ಯವನ್ನು ಕಡಿಮೆ ಮಾಡಿ ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದ ವಿದ್ಯಾರ್ಥಿಗಳು |...

ದ್ವಿತೀಯ ಪಿಯುಸಿ ಪಠ್ಯವನ್ನು ಕಡಿಮೆ ಮಾಡಿ ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದ ವಿದ್ಯಾರ್ಥಿಗಳು | ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಪಠ್ಯ ಕಡಿತ ಹಿನ್ನೆಲೆಯಲ್ಲಿ ಈ ಮನವಿ

Hindu neighbor gifts plot of land

Hindu neighbour gifts land to Muslim journalist

ಕೊರೊನಾ ಮಾಹಾಮಾರಿ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗೆ ಪಠ್ಯಕ್ರಮದಲ್ಲಿ ಶೇ‌.20 ರಷ್ಟನ್ನು ಕಡಿತ ಮಾಡಿತ್ತು ಶಿಕ್ಷಣ ಇಲಾಖೆ‌. ಹಾಗಾಗಿ ಈ ಬಾರಿ ದ್ವಿತೀಯ ಪಿಯು ವಿದ್ಯಾರ್ಥಿಗಳು ನಮಗೂ ಪಠ್ಯ ಕಡಿಮೆ ಮಾಡಿ ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಪೋಷಕರು ಸಹ ವಿದ್ಯಾರ್ಥಿಗಳ ಜೊತೆ ಕೈ ಜೋಡಿಸಿದ್ದು, ಈ ಮನವಿ ಈಗ ಶಿಕ್ಷಣ ಇಲಾಖೆಗೆ ತಲುಪಿದೆ.

ಈ ಕೊರೊನಾದಿಂದಾಗಿ ಅತಿಯಾಗಿ ಸಮಸ್ಯೆಗೆ ಒಳಗಾಗಿರುವುದು ಶಿಕ್ಷಣ ಕ್ಷೇತ್ರ. ಆದರೂ ಕೊರೊನಾ ಸಮಯದಲ್ಲಿಯೂ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಲು ರಾಜ್ಯದ ಶಿಕ್ಷಕರು ಶ್ರಮ ವಹಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಎರಡನೇ ಬಾರಿ ಬಂದಿರುವ ಕೋವಿಡ್ ನಿಂದಾಗಿ ಶಾಲೆಗಳು ಆರಂಭವಾಗಿರುವುದೇ ತಡವಾಗಿ. ಇದರ ಮಧ್ಯೆ ಬಂದ ಕೋವಿಡ್ ಮೂರನೇ ಅಲೆಯಿಂದಾಗಿ ಕೂಡ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಸಮಸ್ಯೆ ಬಂದಿತ್ತು.

ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದ ಹಲವು ಕಡೆ ಹಾಗೂ ಬೆಂಗಳೂರಿನಲ್ಲಿ ಹೆಚ್ಚಾಗಿಯೇ ಪಾಠ ಪ್ರವಚನಕ್ಕೆ ತೊಂದರೆ ಆಗಿತ್ತು. ಹಾಗಾಗಿ ಶೈಕ್ಷಣಿಕ ಕಲಿಕೆ ಸರಿಯಾಗಿ ಆಗಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ದೂರಿದ್ದು, ಎಸ್ ಎಸ್ ಎಲ್ ಸಿ ಪ್ರಕಾರನೇ ನಮಗೂ ಕೂಡಾ ಈ ವರ್ಷದ ಪಿಯು ಮುಖ್ಯ ಪರೀಕ್ಷೆಗೆ ಭಾಷಾ ವಿಷಯ ಮಾತ್ರವಲ್ಲದೇ ಇತರೆ ಐಚ್ಛಿಕ ವಿಷಯಗಳಲ್ಲೂ ಶೇ.20 ಪಠ್ಯ ಕಡಿತ ಮಾಡಲು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.

ಈ ಮನವಿಯನ್ನು ಈಗ ಶಿಕ್ಷಣ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಶಿಕ್ಷಣ ಇಲಾಖೆಯ ಮುಂದೆ ನಡೆ ಏನು? ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎನ್ನುವ ಮಾಹಿತಿ ಸದ್ಯದಲ್ಲೇ ತಿಳಿಯಲಿದೆ.