ಯಾವ ಪಕ್ಷದ ಮೇಲೆ ಪ್ರೇಮ ಎಂಬ ಸೀಕ್ರೆಟ್ ಪ್ರೇಮಿಗಳ ದಿನದಂದು ಔಟ್!-ಸಿ ಎಂ ಇಬ್ರಾಹಿಂ
ಕಳೆದ ಕೆಲ ದಿನಗಳ ಹಿಂದೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಮತ್ತು ಕಾಂಗ್ರೆಸ್ ನಡುವೆ ಯಾವುದೂ ಸರಿ ಇಲ್ಲ ಎಂಬುದು ಬಹಿರಂಗಗೊಂಡಿತ್ತು. ಕಾಂಗ್ರೆಸ್ ನನ್ನನ್ನು ಬಿಟ್ಟಿದ್ದು, ರೇಪ್ ಮಾಡಿಸಿಕೊಂಡವರ ಸ್ಥಿತಿ ನನ್ನದಾಗಿದೆ ಎಂದು ಕಾಂಗ್ರೆಸ್ ನಾಯಕರು, ಹೈಕಮಾಂಡ್ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಪಕ್ಷವೇ ನನಗೆ ಬೇಡ ಎಂದಿದೆ. 21 ಜನ ವಿಧಾನ ಪರಿಷತ್ ಸದಸ್ಯರಲ್ಲಿ ನನಗೆ 19 ಜನ ಬೆಂಬಲ ಸೂಚಿಸಿದರೂ, ನನ್ನನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕನನ್ನಾಗಿ ಮಾಡದಿದ್ದರೆ ಅರ್ಥವೇನು ಎಂದು ಪ್ರಶ್ನಿಸಿದ್ದರು. ಆದಾಯ ಇಲಾಖೆಯವರು ನನ್ನ ಮನೆಗೆ ಬಂದಿಲ್ಲ. ಇಡಿ ಅವರು ಬಂದು ದಾಳಿ ಮಾಡಲಿಲ್ಲ. ನಿನ್ನ ಕೈಲಿ ಭಾರ ಹೊರೊಕೆ ಆಗಲ್ಲ. ನಮಗೆ ಖಾಲಿ ಕೈ ಬೇಕಿಲ್ಲ. ಬೆಣ್ಣೆ ಹಚ್ಚೋರು ಬೇಕೂಂತ ನನ್ನನ್ನು ಪಕ್ಕಕ್ಕೆ ಸರಿಸಿಬಿಟ್ಟಿದ್ದಾರೆ. ನಾನು ಸಂತೋಷವಾಗಿ ಒಪ್ಪಿಕೊಂಡಿದ್ದೇನೆ ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಸಿದ್ದರಾಮಯ್ಯ ಪಕ್ಷದಲ್ಲಿ ಅಸಹಾಯಕರಾಗುತ್ತಿದ್ದಾರೆ. ಈಗಾಗಲೇ ನಾನು ಪಕ್ಷದ ವಿರುದ್ಧ ಹೋರಾಟ ಪ್ರಾರಂಭ ಮಾಡಿದ್ದೇನೆ. ಇನ್ನು ತಮ್ಮ ಆಪ್ತ ಸಿದ್ದರಾಮಯ್ಯ ಬಗ್ಗೆನೂ ಮಾತನಾಡಿದ ಇಬ್ರಾಹಿಂ ಕಾಂಗ್ರೆಸ್ ಪಕ್ಷದಲ್ಲಿ ನನ್ನದೇ ಸ್ಥಿತಿ ಸಿದ್ದರಾಮಯ್ಯನವರಿಗೆ ಬರುತ್ತೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತೆ ಎಂದು ಟಾಂಗ್ ನೀಡಿದ್ದಾರೆ. ಲವರ್ಸ್ ಡೇ ದಿನ ನನಗೆ ಯಾವ ಪಕ್ಷದ ಮೇಲೆ ಲವ್ ಎಂಬುದನ್ನು ಹೇಳುತ್ತೇನೆ ಎಂದು ನಗೆಯಾಡಿದ್ದಾರೆ.