Home Interesting 500 ವರ್ಷಗಳ ಹಿಂದಿನ ದೇವಾಲಯಕ್ಕೆ ರಸ್ತೆ ನಿರ್ಮಿಸಲು ತಮ್ಮ ಭೂಮಿ ದಾನ ಮಾಡಿದ ಮುಸ್ಲಿಮರು |...

500 ವರ್ಷಗಳ ಹಿಂದಿನ ದೇವಾಲಯಕ್ಕೆ ರಸ್ತೆ ನಿರ್ಮಿಸಲು ತಮ್ಮ ಭೂಮಿ ದಾನ ಮಾಡಿದ ಮುಸ್ಲಿಮರು | ಇದೊಂದು ಅಪರೂಪದ ಧಾರ್ಮಿಕ ಸಾಮರಸ್ಯದ ಸಂದೇಶ

Hindu neighbor gifts plot of land

Hindu neighbour gifts land to Muslim journalist

ಮಲ್ಲಪುರಂ : ಇಬ್ಬರು ಮುಸ್ಲಿಮರು ದೇವಸ್ಥಾನಕ್ಕೆ ಬೇಕಾಗುವ ರಸ್ತೆ ನಿರ್ಮಾಣ ಮಾಡಲು ಭೂಮಿ ದಾನ ನೀಡುವ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶವನ್ನು ಎಲ್ಲೆಡೆ ಸಾರಿದ್ದಾರೆ.

500 ವರ್ಷಗಳಷ್ಟು ಹಿಂದಿನ ದೇವಾಲಯಕ್ಕೆ ಇವರು ತಮ್ಮ ಭೂಮಿ ದಾನ ಮಾಡಿದ್ದಾರೆ. ಕೂಡಿಲಂಗಡಿ ಪಂಚಾಯತಿ ನಿವಾಸಿಗಳಾದ ಸಿ ಎಚ್ ಅಬೂಬಕರ್ ಹಾಜಿ ಮತ್ತು ಎಂ ಉಸ್ಮಾನ್ ಅವರು ನಾಲ್ಕು‌ ಸೆಂಟ್ಸ್ ಜಾಗವನ್ನು ಪಂಚಾಯತಿಗೆ ನೀಡಿದ್ದಾರೆ.

ಕೂಡಿಲಂಗಡಿ ಕಡುಂಗೂತ್ ಮಹಾದೇವ ದೇವಸ್ಥಾನಕ್ಕೆ 10 ಅಡಿ ಅಗಲದ 60 ಮೀಟರ್ ರಸ್ತೆಯನ್ನು ನಿರ್ಮಿಸಲು ಇವರು ಭೂಮಿ ದಾನ ಮಾಡಿದ್ದಾರೆ.

ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮಂಕಡ ಶಾಸಕ ಮಂಜಳಂಕುಳಿ ಅಲಿ ಅಧ್ಯಕ್ಷತೆಯಲ್ಲಿ ಪಂಚಾಯತಿ ಅಧಿಕಾರಿಗಳು ಕಂದಾಯ ಅಧಿಕಾರಿಗಳು, ಮಲಬಾರ್ ದೇವಸ್ವಂ ಮಂಡಳಿ ಅಧಿಕಾರಿಗಳು ಹಾಗೂ ನಿವಾಸಿಗಳ ಸಭೆ ಇತ್ತೀಚೆಗೆ ನಡೆಯಿತು. ಈ ಸಭೆಯಲ್ಲಿ ಅಬೂಬಕರ್ ಮತ್ತು ಉಸ್ಮಾನ್ ಅವರು ತಮ್ಮ ಜಮೀನಿನ ಭಾಗವನ್ನು ರಸ್ತೆಗಾಗಿ ನೀಡಿದರು.