Home Interesting ಮದುವೆಯಾಗಿ 32 ವರ್ಷಗಳ ಬಳಿಕ ‘ಮೊದಲ ರಾತ್ರಿ’ ಯ ದೂರು ದಾಖಲಿಸಿದ ಐಎಎಸ್ ದಂಪತಿ |

ಮದುವೆಯಾಗಿ 32 ವರ್ಷಗಳ ಬಳಿಕ ‘ಮೊದಲ ರಾತ್ರಿ’ ಯ ದೂರು ದಾಖಲಿಸಿದ ಐಎಎಸ್ ದಂಪತಿ |

Hindu neighbor gifts plot of land

Hindu neighbour gifts land to Muslim journalist

ಇದೇನು ? ಮದುವೆಯಾಗಿ 32 ವರ್ಷ ಕಳೆದ ಬಳಿಕ ದಂಪತಿಯ ಮೊದಲ ರಾತ್ರಿಯ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಎಂಬುದು ನಿಮಗೆ ಕುತೂಹಲ ಮೂಡಿಸಿರುವುದಂತೂ ನಿಜ. ಇದಕ್ಕೆ ಕಾರಣವನ್ನು ಕೂಡಾ ಸವಿವರವಾಗಿ ವಿವರಿಸಿದ್ದಾರೆ ದೂರುದಾರರು. ಅದೇನು ಬನ್ನಿ ತಿಳಿಯೋಣ.

ಬಾಲಾ ಪ್ರಸಾದ್ ಅಶ್ವಥಿ ಹಾಗೂ ಅವರ ಪತ್ನಿಯ ವಿವಾದ ಇದು. ಇಬ್ಬರೂ ಐಎಎಸ್ ಅಧಿಕಾರಿಗಳಾಗಿದ್ದು ಬಾಲಾ ಅವರು ಇದೀಗ ನಿವೃತ್ತರಾಗಿದ್ದಾರೆ. ತಮ್ಮ ಪತಿ ದೈಹಿಕ ಹಾಗೂ ಮಾನಸಿಕವಾಗಿ ಇಷ್ಟು ವರ್ಷಗಳು ತಮಗೆ‌ ಹೇಗೆಲ್ಲಾ ಹಿಂಸೆ ನೀಡಿದರು ಎಂಬ ಬಗ್ಗೆ ಪತ್ನಿ ಪೊಲೀಸರಲ್ಲಿ ಬರೋಬ್ಬರಿ 32 ವರ್ಷಗಳ ಬಳಿಕ ಪ್ರಕರಣ ದಾಖಲಿಸಿದ್ದಾರೆ.

ಈ ಐಎಎಸ್ ದಂಪತಿಯ ವಿವಾಹವು 1990 ರ ಮೇ ತಿಂಗಳಲ್ಲಿ ನಡೆದಿದೆ. ಪತ್ನಿ ಹೇಳುವ ಪ್ರಕಾರ ಪತಿ ಮೊದಲ ರಾತ್ರಿಯಂದೇ ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥರು ಎಂದು ಬಗ್ಗೆ ತಿಳಿದಿದ್ದರೂ, ಇದು ಅವರು ನನಗೆ ಮೋಸ ಮಾಡಿರುವುದಾಗಿ ಪತ್ನಿ ಕಂಪ್ಲೇಂಟ್ ನಲ್ಲಿ ತಿಳಿಸಿದ್ದಾರೆ.

ಇಷ್ಟು ಮಾತ್ರವಲ್ಲದೇ ಪತಿ ಯಾವಾಗ ದೈಹಿಕ ಅಸಮರ್ಥ ಎಂದು ತಿಳಿಯಿತೋ ಅಲ್ಲಿಂದ ಇಲ್ಲಿಯವರೆಗೆ ಹಿಂಸೆ ನೀಡುತ್ತಿರುವುದಾಗಿ ಪತ್ನಿ ಹೇಳಿದ್ದಾರೆ.

‘ ಮೊದಲ ರಾತ್ರಿ ಪತಿ ಅಸಮರ್ಥ ಎಂದು ನ‌ನಗೆ ತಿಳಿಯಿತು. ಅನಂತರ ಪತಿಯ ಸ್ನೇಹಿತರನ್ನು ಕರೆತಂದು ಅವರ ಜೊತೆ ಲೈಂಗಿಕ ಸಂಬಂಧ ಹೊಂದಲು ಬೆದರಿಕೆ ಹಾಕುತ್ತಿದ್ದರು. ಅದನ್ನು ನಿರಾಕರಿಸಿದಾಗ ದೈಹಿಕ ಕಿರುಕುಳ ಕೊಡಲು ಶುರುಮಾಡಿದರು. ಕೈ ಮುರಿಯಲು ಪ್ರಯತ್ನಿಸಿದರು. ಇಷ್ಟು ವರ್ಷ ಅವರನ್ನು ಸಹಿಸಿಕೊಂಡು ಬಂದಿದ್ದೇನೆ ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾರೆ.

ನನ್ನ ಸಂಬಳವನ್ನು ಅವರ ಬ್ಯಾಂಕ್ ಖಾತೆಗೆ ಮೋಸದಿಂದ ಅಟ್ಯಾಚ್ ಮಾಡಿಕೊಂಡಿದ್ದರು. ಅಷ್ಟೂ ಸಂಬಳವನ್ನು ತಾವೇ ಪಡೆದು ಮನೆ ಖರ್ಚಿಗೆ ಕೇವಲ 6 ಸಾವಿರ ರೂಪಾಯಿ ನೀಡುತ್ತಿದ್ದರು. ಖರ್ಚಿಗೆ ಹೆಚ್ಚು ಹಣ ಕೇಳಿದರೆ ನನಗೆ ಹಲ್ಲೆ ಮಾಡುತ್ತಿದ್ದರು. ನಕಲಿ ಸಹಿ ಮಾಡಿ ನನ್ನ ಖಾತೆಯಿಂದ ವಹಿವಾಟು ನಡೆಸಿದ್ದಾರೆ. ನಕಲಿ ಇ ಮೇಲ್ ಐ ಡಿ ಸೃಷ್ಟಿಸಿ ನನ್ನ ಅಣ್ಣನಿಂದ ಐದು ಲಕ್ಷ ರೂಪಾಯಿ ಪಡೆದಿದ್ದಾರೆ. ಕೊರೊನಾ ಸಮಯದಲ್ಲಿ ಕೊರೊನಾ ಬಂದಿದ್ದರೂ ನಮ್ಮಿಂದ ಮರೆಮಾಚಿದ್ದರು. ಅವರಿಂದಾಗಿ ಇಡೀ ಕುಟುಂಬ ಕೊರೊನಾ ಮಹಾಮಾರಿಗೆ ತುತ್ತಾಗಬೇಕಾಯಿತು. ನಾನೂ ಕೂಡಾ ದೊಡ್ಡ ಹುದ್ದೆಯಲ್ಲಿ ಇರುವುದರಿಂದ ಇಷ್ಟು ವರ್ಷ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ ಈಗ ಸಹಿಸಿಕೊಳ್ಳುವುದು ಅಸಾಧ್ಯ ಎಂದು ದೂರಿನಲ್ಲಿ ಸವಿವರವಾಗಿ ಬರೆದಿದ್ದಾರೆ.

ತನಿಖೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ