Home latest ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಹಿಂದೂ ಯುವತಿಯೊಂದಿಗೆ ಅನ್ಯಧರ್ಮದ ಯುವಕ ಎಸ್ಕೇಪ್!! ಪ್ರಕರಣದ ಸುತ್ತ...

ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಹಿಂದೂ ಯುವತಿಯೊಂದಿಗೆ ಅನ್ಯಧರ್ಮದ ಯುವಕ ಎಸ್ಕೇಪ್!! ಪ್ರಕರಣದ ಸುತ್ತ ಹಲವು ಅನುಮಾನ-ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಫೋಟೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಶೃಂಗೇರಿ: ತಾಲೂಕಿನ ಹಿಂದೂ ಯುವತಿಯನ್ನು ಮೂಡಿಗೆರೆ ನಿವಾಸಿ ಅನ್ಯಧರ್ಮದ ಯುವಕನೋರ್ವ ಪುಸಲಾಯಿಸಿ, ಆಕೆಯು ಆತನೊಂದಿಗೆ ಓಡಿ ಹೋದ ಘಟನೆ ಬೆಳಕಿಗೆ ಬಂದಿದ್ದು, ವಿಚಾರ ಸುದ್ದಿಯಾಗುತ್ತಿದ್ದಂತೆ ಇಬ್ಬರ ಫೋಟೋ ಕೂಡಾ ಲವ್ ಜಿಹಾದ್ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಅನ್ಯಧರ್ಮಕ್ಕೆ ಸೇರಿದ ಯುವಕ ಜುನೈದ್, ಈ ಮೊದಲು ಆಕೆಯನ್ನು ತಾನೊಬ್ಬ ಹಿಂದೂ ಎಂದು ನಂಬಿಸಿ ಪುಸಲಾಯಿಸಿದ್ದ.ಘಟನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿ ಯುವಕನ ಬಂಧನಕ್ಕೆ ಆಗ್ರಹಿಸಿ, ಮುಂದೆ ಹಿಂದೂ ಯುವತಿಯರು ಹಾಗೂ ಮಹಿಳೆಯರು ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಅದಲ್ಲದೇ ಯುವತಿಯು ಈ ಮೊದಲು ಅಂದರೆ 2021 ರಲ್ಲಿ ಜುನೈದ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಳು. ಆದರೆ ಕಳೆದ ಎರಡು ತಿಂಗಳ ಹಿಂದೆ ಜುನೈದ್ ಜೈಲಿನಿಂದ ಹೊರಬಂದಿದ್ದು, ತನ್ನ ಮೇಲೆ ಪ್ರಕರಣ ದಾಖಲಿಸಿದ್ದ ಯುವತಿಯೊಂದಿಗೆ ಪರಾರಿಯಾಗಿದ್ದಾನೆ.

ಸದ್ಯ ಪ್ರಕರಣದ ಸುತ್ತ ಹಲವು ಅನುಮಾನಗಳು ಎದ್ದಿವೆ.