ಹೋಟೆಲ್ ಒಂದರ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!! ರೂಪದರ್ಶಿ ಯುವತಿಯ ಸ್ಥಿತಿ ಗಂಭೀರ

Share the Article

ರೂಪದರ್ಶಿ ಯುವತಿಯೊಬ್ಬಳು ಹೋಟೆಲ್ ಒಂದರ ಆರನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜೋದ್ ಪುರದಲ್ಲಿ ನಡೆದಿದ್ದು,ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಗುನ್ ಗುನ್ ಎಂದು ಗುರುತಿಸಲಾಗಿದೆ.

ರೂಪದರ್ಶಿಯಾಗಿದ್ದ ಈಕೆ ತನ್ನ ತಂದೆಗೆ ಸಂದೇಶವೊಂದನ್ನು ಕಳುಹಿಸಿದ್ದು, ಅದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದಳು. ಆದರೆ ತಂದೆ ಬರುವ ಮುಂಚೆಯೇ ಹೋಟೆಲ್ ಒಂದರ ಆರನೇ ಮಹಡಿಯಿಂದ ಜಿಗಿದಿದ್ದು,ಗಂಭೀರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Leave A Reply