ಮಂಗಳೂರು :ಹಾಲಿನ ಖರೀದಿ ಬೆಲೆ ಹೆಚ್ಚಳ |ಪ್ರತೀ ಲೀಟರ್ ಹಾಲಿಗೆ 1 ರೂ.ಏರಿಸಿ, 29 ರೂ.ಗಳಂತೆ ನಿಗದಿ ಪಡಿಸಿದ -ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ
ಮಂಗಳೂರು: ಫೆ. 1ರಿಂದ ಅನ್ವಯವಾಗುವಂತೆ ಪ್ರತೀ ಲೀಟರ್ ಹಾಲಿನ ಖರೀದಿಗೆ 1 ರೂ. ಹೆಚ್ಚುವರಿಯಾಗಿ ನೀಡಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಿರ್ಧರಿಸಿದೆ.
ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ ಚೇತರಿಸಿರುವುದರಿಂದ ಹೈನುಗಾರರನ್ನು ಉತ್ತೇಜಿಸಲು ಹಾಲಿನ ಖರೀದಿ ದರವನ್ನು ಪರಿಷ್ಕರಿಸಿ, ಗುಣಮಟ್ಟದ ಪ್ರತೀ ಲೀಟರ್ ಹಾಲಿಗೆ ಈಗಿನ 28 ರೂ.ಗಳಿಂದ 1 ರೂ. ಏರಿಸಿ, 29 ರೂ.ಗಳಂತೆ ನಿಗದಿ ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.