ವಿಟ್ಲ: ಸಾಕುದನದ ಕಾಲು ಕತ್ತರಿಸಿ ವಿಕೃತ್ಯ!! ರಾಕ್ಷಸ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಗೆ ಆಗ್ರಹ

Share the Article

ವಿಟ್ಲ: ಸಾಕುದನವೊಂದರ ಕಾಲು ಕತ್ತರಿಸಿ ರಾಕ್ಷಸ ಕೃತ್ಯ ಎಸಗಿರುವ ಪ್ರಕರಣವೊಂದು ವಿಟ್ಲ ತಾಲೂಕಿನ ಅಡ್ಯನಡ್ಕ ಎಂಬಲ್ಲಿಂದ ವರದಿಯಾಗಿದೆ.

ಅಡ್ಯನಡ್ಕ ಕೆದುಮೂಲೆ ನಿವಾಸಿ ಕೃಷಿಕರೊಬ್ಬರಿಗೆ ಸೇರಿದ ದನವನ್ನು ನೆಗಳಗುಳಿ ಎಂಬ ಪ್ರದೇಶದಲ್ಲಿ ಕಾಲು ಕತ್ತರಿಸಿ ದುಷ್ಕರ್ಮಿಗಳು ವಿಕೃತ್ಯ ಮೆರೆದಿದ್ದಾರೆ.

ಘಟನೆಯ ಬಗ್ಗೆ ತಾಲೂಕಿನೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು,ಮೂಕ ಪ್ರಾಣಿಯನ್ನು ಹಿಂಸಿಸಿ ಖುಷಿ ಕಾಣುವ ದುಷ್ಕರ್ಮಿ ರಾಕ್ಷಸರಿಗೆ ತಕ್ಕ ಶಿಕ್ಷೆಯಾಗಲಿ ಎಂಬ ಆಗ್ರಹ ವ್ಯಕ್ತವಾಗಿದೆ.

Leave A Reply