ರವಿ ಡಿ ಚೆನ್ನಣ್ಣನವರ್ ವರ್ಗಾವಣೆ ಆದೇಶ ಏಕಾಏಕಿ ತಡೆ ಹಿಡಿದ ಸರಕಾರ!!!

Share the Article

ಕರ್ನಾಟಕ ರಾಜ್ಯ ಸರಕಾರವು ಜನವರಿ 26 ರಂದು ರವಿ ಡಿ ಚನ್ನಣ್ಣನವರ್ ಸೇರಿ‌ ಒಟ್ಟು‌9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.

ರವಿ ಡಿ ಚೆನ್ನಣ್ಣನವರ್ ಸಿಐಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜ್ಯ ಸರಕಾರ ರವಿ ಡಿ ಚೆನ್ನಣ್ಣನವರ್ ರವರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಆಗಿ ವರ್ಗಾವಣೆ ಮಾಡಿತ್ತು. ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಆಗಿ ವರ್ಗಾಯಿಸಿದ್ದ ರಾಜ್ಯ ಸರಕಾರ ಇದೀಗ ಆದೇಶಕ್ಕೆ ತಡೆ ಹಿಡಿದಿದೆ.

ಆದರೆ ಇದೀಗ ಕರ್ನಾಟಕ ಸರಕಾರ ಏಕಾಏಕಿ ರವಿ ಡಿ ಚೆನ್ನಣ್ಣನವರ್ ಅವರ ವರ್ಗಾವಣೆ ಆದೇಶವನ್ನು ತಡೆಹಿಡಿಯಲಾಗಿದೆ ಎಂದು ಸುತ್ತೋಲೆ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರವಿ ಡಿ ಚೆನ್ನಣ್ಣನವರ್ ವರ್ಗಾವಣೆಗೆ ಸರಕಾರ ಬ್ರೇಕ್ ಹಾಕಿದೆ.

Leave A Reply