ರಾಜ್ಯ ಸರಕಾರಿ ನೌಕರರಿಗೆ ಕೊರೊನಾ ಬಂದರೆ 7 ದಿನಗಳ ವಿಶೇಷ ರಜೆ | ಸರಕಾರದಿಂದ ಆದೇಶ

Share the Article

ಬೆಂಗಳೂರು : ಕೊರೊನಾ ವೈರಸ್ ಸೋಂಕಿಗೆ ಒಳಗಾಗುವ ಸರಕಾರಿ ನೌಕರರಿಗೆ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆ ಎಂದು ಸರಕಾರ ಆದೇಶ ಹೊರಡಿಸಿದೆ.

ಸರಕಾರಿ ನೌಕರ ಅಥವಾ ಆತನ ಕುಟುಂಬದ ಸದಸ್ಯರು ಕೋವಿಡ್ 19 ಸಾಂಕ್ರಾಮಿಕ ರೋಗಕ್ಕೆ ಒಳಪಟ್ಟ ಸಂದರ್ಭದಲ್ಲಿ ಹಾಗೂ ಸರಕಾರಿ ನೌಕರನು ವಾಸಿಸುವ ಪ್ರದೇಶದಲ್ಲಿ ಕಂಟೋನ್ಮೆಂಟ್ ಪ್ರದೇಶವೆಂದು ಘೋಷಿಸಿ ಸಾರ್ವಜನಿಕ ಸಂಚಾರದಲ್ಲಿ ಯಾವುದೇ ನಿರ್ಬಂಧ ವಿಧಿಸಿದ್ದಲ್ಲಿ ಅಂತಹ ಸರಕಾರಿ ನೌಕರರಿಗೆ ಗರಿಷ್ಠ 7 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು.

Leave A Reply