ಮದುವೆಯ ಮೊದಲ ರಾತ್ರಿಯನ್ನು ಠಾಣೆಯಲ್ಲಿ ಕಳೆದ ನವಜೋಡಿ-ಮಾರನೆಯ ದಿನ ಜಾಮೀನಿನ ಮೇಲೆ ಬಿಡುಗಡೆ!! ಅಚ್ಚರಿಯ ಫಸ್ಟ್ ನೈಟ್ ಗೆ ಕಾರಣವೇನು!??

ಅಹಮದಬಾದ್: ಮದುವೆ ಮುಗಿಸಿಕೊಂಡು ರಾತ್ರಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ನವ ಜೋಡಿಯನ್ನು ಪೊಲೀಸರು ರಸ್ತೆ ಮಧ್ಯೆ ತಡೆದಿದ್ದು, ಈ ವೇಳೆ ವರ ಪೊಲೀಸರೊಂದಿಗೆ ಅನುಚಿತ ವರ್ತನೆ ತೋರಿದ ಕಾರಣ ಮನೆಯಲ್ಲಿ ಮೊದಲ ರಾತ್ರಿ ಕಳೆಯಲಿದ್ದ ನವಜೋಡಿಯು ಠಾಣಾ ಲಾಕ್ ಅಪ್ ನಲ್ಲಿ ಕಳೆದ ಅಚ್ಚರಿಯ ಘಟನೆಯು ಗುಜರಾತ್ ನ ವಲ್ಸದ್ ನಗರದಲ್ಲಿ ನಡೆದಿದೆ.

 

ಘಟನೆ ವಿವರ: ಮದುವೆಯ ದಿನ ರಾತ್ರಿ ಮನೆಯವರೊಂದಿಗೆ ಮದುವೆ ಮುಗಿಸಿಕೊಂಡು ವಧುವಿನೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ನವ ಜೋಡಿಯನ್ನು ಕೊರೋನ ನಿಯಮದ ಪ್ರಕಾರ ಪೊಲೀಸರು ತಡೆದಿದ್ದರು.

ಕೊರೋನ ನಿಯಮ ಪಾಲನೆಯನ್ನು ಮರೆತಿದ್ದ ಜೋಡಿಗೆ ಪೊಲೀಸರು ಬುದ್ಧಿ ಮಾತು ಹೇಳುವ ಸಂದರ್ಭದಲ್ಲಿ ವರನು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದು, ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.ಈ ವೇಳೆ ಪೊಲೀಸರು ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದುಕೊಂಡರು.

ಘಟನೆಯಿಂದಾಗಿ ಮೊದಲ ರಾತ್ರಿಯನ್ನು ನವ ದಂಪತಿಯು ಲಾಕ್ ಅಪ್ ನಲ್ಲಿ ಕಳೆಯುವಂತಾಗಿದ್ದು, ಮಾರಾನೆಯ ದಿನ ಜಾಮೀನಿನ ಮೇಲೆ ಇಬ್ಬರನ್ನೂ ಬಿಡುಗಡೆಗೊಳಿಸಲಾಗಿದೆ.

Leave A Reply

Your email address will not be published.