ಪಾದಾಚಾರಿಗಳೇ ಇತ್ತ ಗಮನಿಸಿ : ಇನ್ನು ಮುಂದೆ ಎಲ್ಲೆಂದರಲ್ಲಿ ರಸ್ತೆ ದಾಟಿದರೆ ಬೀಳುತ್ತೆ ದಂಡ !!
ಇಲ್ಲಿಯವರೆಗೆ ರೂಲ್ಸ್ ಬ್ರೇಕ್ ಮಾಡಿದರೆ ವಾಹನ ಸವಾರರಿಗೆ ಮಾತ್ರ ದಂಡ ವಿಧಿಸುತ್ತಿದ್ದ ಸಂಚಾರಿ ಪೊಲೀಸ್ ಇಲಾಖೆ ಈಗ ಪಾದಾಚಾರಿಗಳಿಗೂ ದಂಡ ವಿಧಿಸಲು ಚಿಂತನೆ ನಡೆಸುತ್ತಿದೆ
ಎಲ್ಲೆಂದರಲ್ಲಿ ರಸ್ತೆ ದಾಟಿ ಕಳೆದ ವರ್ಷ 69 ಜನ ಮೃತಪಟ್ಟಿದ್ದು, ಈ ತೊಂದರೆಗಳಿಂದ ಜನರ ಜೀವ ಉಳಿಸಲು ಹೊಸ ನಿಯಮ ತರುವ ಪ್ರಸ್ತಾವನೆಯನ್ನು ಸಂಚಾರಿ ಪೊಲೀಸ್ ಇಲಾಖೆ ತಯಾರಿಸಿದೆ.
ಜೀಬ್ರಾ ಕ್ರಾಸಿಂಗ್, ನಿಗದಿತ ಸ್ಥಳದಲ್ಲಿ ಮಾತ್ರ ರಸ್ತೆ ದಾಟುವುದು ಇವುಗಳನ್ನು ಹೊರತುಪಡಿಸಿ ಬೇಕಾಬಿಟ್ಟಿಯಾಗಿ ರಸ್ತೆ ದಾಟುವವರಿಗೆ ದಂಡ ವಿಧಿಸಲು ಸಂಚಾರಿ ಪೊಲೀಸ್ ಇಲಾಖೆ ನಿರ್ಧರಿಸಿದೆ.
ಆದರೆ ಈ ನಿಯಮಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ನಗರದಲ್ಲಿ ಜೀಬ್ರಾ ಕ್ರಾಸ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಸಂಚಾರಿ ಪೊಲೀಸ್ ಇಲಾಖೆ ಪರಾಮರ್ಶಿಸಬೇಕು. ಜೀಬ್ರಾ ಕ್ರಾಸ್ ಎಲ್ಲೆಲ್ಲಿದೆ ಅದನ್ನು ಹುಡುಕಿಕೊಂಡು ಹೋಗಿ ರೋಡ್ ಕ್ರಾಸ್ ಮಾಡೋಕ್ಕಾಗುತ್ತಾ ? ಕೇವಲ ದಂಡ ಮಾತ್ರ ಹಾಕುವುದಲ್ಲ ಅದಕ್ಕೆ ತಕ್ಕಂತೆ ವ್ಯವಸ್ಥೆ ಕೂಡಾ ಇರಬೇಕು ಎಂದು ಸಾರ್ವಜನಿಕ ವಲಯದಿಂದ ದಟ್ಟವಾಗಿ ಕೇಳಿಬರುವ ದೂರಾಗಿದೆ.
ಈ ಬಗ್ಗೆ ಸಂಚಾರಿ ಪೊಲೀಸ್ ಇಲಾಖೆ ಏನು ಮಾಡಲಿದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.