ಜಗತ್ತಿನ ನಂ.1 ಸ್ಥಾನಕ್ಕೆ ಏರಿ ನಿಂತ ಭಾರತದ ಪ್ರಧಾನಿ | ಜಗತ್ತಿನ ಘಟಾನುಘಟಿ ನಾಯಕರುಗಳ ಹಿಂದಿಕ್ಕಿದ ನರೇಂದ್ರ ಮೋದಿ !
ಅಮೆರಿಕಾದ ಖ್ಯಾತ ಮಾರ್ನಿಂಗ್ ಕನ್ಸಲ್ಟನ್ಸಿ ಇಂಟಲಿಜೆನ್ಸಿ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಂ.1 ಸ್ಥಾನ ಪಡೆದಿದ್ದಾರೆ. ಮೆಕ್ಸಿಕೋದಾ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು 66% ರೇಟಿಂಗ್ ಪಡೆಯುವ ಮೂಲಕ 2 ನೇ ಸ್ಥಾನದಲ್ಲಿದ್ದಾರೆ. ಇಟಾಲಿಯನ್ ಪ್ರಧಾನಿ ಮಾರಿಯೊ ಡ್ರಾಗಿ 60% ರೇಟಿಂಗ್ ಪಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದ ನರೇಂದ್ರ ಮೋದಿಗೆ ಶೇ.71 ರಷ್ಟು ಮತಗಳು ಲಭಿಸಿ 1 ಸ್ಥಾನ ಪಡೆದಿದ್ದಾರೆ. 13 ಮಂದಿ ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆ ಇದಾಗಿದೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಶೇ.43 ರೇಟಿಂಗ್ ಪಡೆದಿದ್ದಾರೆ. ಹಾಗೂ 6 ನೇ ಸ್ಥಾನ ಪಡೆದುಕೊಂಡಿದ್ದಾರೆ. ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡೋ ಕೂಡಾ ಶೇ. 43 ರೇಟಿಂಗ್ ಪಡೆದು ಜೋ ಬೈಡನ್ ಅವರಿಗೆ ಸಮಾನಾಂತರ ಸ್ಥಾನದಲ್ಲಿದ್ದಾರೆ.
ಇನ್ನು ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ 13 ಜಾಗತಿಕ ನಾಯಕರ ಪೈಕಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶೇ.71 ರಷ್ಟು ಅನುಮೋದನೆ ರೇಟಿಂಗ್ ಹೊಂದುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
2021 ರಲ್ಲೂ ಬಿಡುಗಡೆಯಾದ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರು ಮೊದಲ ಸ್ಥಾನದಲ್ಲಿದ್ದರು.
ಈ ಸಮೀಕ್ಷೆಯಲ್ಲಿ ನೀಡಲಾದ ರೇಟಿಂಗ್ 2022 ರ ಜನವರಿ 13 ರಿಂದ 19 ರವರೆಗೆ ಸಂಗ್ರಹಿಸಲಾದ ಡೇಟಾವನ್ನು ಆಧರಿಸಿದೆ ಎಂದು ಮಾರ್ನಿಂಗ್ ಕನ್ಸಲ್ಟ್ ತನ್ನ ವೆಬ್ಸೈಟ್ ನಲ್ಲಿ ತಿಳಿಸಿದೆ.