Home Karnataka State Politics Updates ರಾಜ್ಯಾದ್ಯಂತ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ ತೆರವು-ಮುಖ್ಯಮಂತ್ರಿ ಬೊಮ್ಮಾಯಿ!! ಕರ್ಫ್ಯೂ ಬದಲಿಗೆ ಟಫ್ ರೂಲ್ಸ್ ಜಾರಿ

ರಾಜ್ಯಾದ್ಯಂತ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ ತೆರವು-ಮುಖ್ಯಮಂತ್ರಿ ಬೊಮ್ಮಾಯಿ!! ಕರ್ಫ್ಯೂ ಬದಲಿಗೆ ಟಫ್ ರೂಲ್ಸ್ ಜಾರಿ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಕೊರೋನ ಮಹಾಮಾರಿಯ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ರಾಜ್ಯಾದ್ಯಂತ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

ತಜ್ಞರ ಅಭಿಪ್ರಾಯ ಆಧರಿಸಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ನಿಯಮದಲ್ಲಿ ವೀಕೆಂಡ್ ಕರ್ಫ್ಯೂ ರದ್ದು ಮಾಡಿ, ನೈಟ್ ಕರ್ಫ್ಯೂ ಮುಂದುವರಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ತಜ್ಞರ ಸಭೆಯಲ್ಲಿ ಸಚಿವರ ಸಲಹೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು,ಮೂರನೇ ಅಲೆಯು ವ್ಯಾಪಕವಾಗಿ ತೀವ್ರತೆ ಹೆಚ್ಚಿಲ್ಲ ,ಈ ನಡುವೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆಯಿದ್ದು, ಹೆಚ್ಚಾದಲ್ಲಿ ಮುಂದಿನ ಕ್ರಮ ಕೈಗೊಳ್ಳೋಣ ಎಂಬ ಸಚಿವರ ಸಲಹೆಗೆ ಬೊಮ್ಮಾಯಿ ಸಹಮತ ಸೂಚಿಸಿದರು.

ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದರೂ ಕೂಡಾ ತೀವ್ರತೆ ಕಡಿಮೆಯಾಗಿದೆ. ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳೋಣ, ಒಂದೊಮ್ಮೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾದರೆ ಆಗ ಬಿಗಿಕ್ರಮವನ್ನು ಕೈಗೊಳ್ಳಬಹುದು ಎಂದು ಸಚಿವರು ಸಲಹೆ ನೀಡಿದ್ದರು. ಅಲ್ಲದೇ ತಜ್ಞರು ಕೂಡಾ ವೀಕೆಂಡ್ ಕರ್ಫ್ಯೂ ರದ್ದು ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಆದರೆ ಬಿಬಿಎಂಪಿ ಮಾತ್ರ ಒಂದು ವಾರದ ಮಟ್ಟಿಗಾದರೂ ವೀಕೆಂಡ್ ಕರ್ಫ್ಯೂವನ್ನು ಮುಂದುವರಿಸಬೇಕು ಎಂದು ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಅಂತಿಮವಾಗಿ ಜನರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ವೀಕೆಂಡ್ ಕರ್ಫ್ಯೂ ರದ್ದು ಮಾಡುವ ತೀರ್ಮಾನಕ್ಕೆ ಸಹಮತ ದೊರೆತಿದೆ.

ಇನ್ನು ಹೆಚ್ಚು ಜನಸಂದನಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದು, ಬಾರ್, ರೆಸ್ಟೋರೆಂಟ್, ಹೋಟೆಲ್- ಪಬ್ ಗಳಲ್ಲಿ ಶೇ 50. ರಷ್ಟು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಮದುವೆ ಇನ್ನಿತರ ಸಮಾರಂಭ ಗಳಿಗೆ ಈ ಮೊದಲಿದ್ದ ರೂಲ್ಸ್ ಅನ್ವಯಿಸಲಿದೆ.

ಇನ್ನು ನಾಳೆಯಿಂದಲೇ ( ಜ.22) ವೀಕೆಂಡ್ ಕರ್ಫ್ಯೂ ರದ್ದಾಗಲಿದ್ದು, ಎಂದಿನಂತೆ ನೈಟ್ ಕರ್ಫ್ಯೂ ಮುಂದುವರಿಯಲಿದೆ. ಆಸ್ಪತ್ರೆಗೆ ಸೇರುವವರ ಪ್ರಮಾಣ ಶೇ.5 ಕ್ಕಿಂತ ಹೆಚ್ಚಾದರೆ ಮತ್ತೆ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗುತ್ತೆ.

ರಾತ್ರಿ ಕರ್ಫ್ಯೂ ಸೇರಿದಂತೆ ಉಳಿದ ನಿರ್ಬಂಧಗಳು ಮುಂದುವರಿಕೆ ಆಗಲಿವೆ. ಧರಣಿ, ಪ್ರತಿಭಟನೆ, ರ್ಯಾಲಿ ನಡೆಸುವಂತಿಲ್ಲ. ಇದು ಇಡೀ ಕರ್ನಾಟಕಕ್ಕೆ ಅನ್ವಯ.

ಕೋವಿಡ್ 19 ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜನವರಿ 29 ರವರೆಗೆ ಶಾಲಾ ಕಾಲೇಜುಗಳು ಇರುವುದಿಲ್ಲ.

ಈಗಿರುವಂತೆ 10-12 ರವರೆಗಿನ ತರಗತಿಗಳಿಗೆ ಭೌತಿಕ ತರಗತಿ. ಉಳಿದ ಜಿಲ್ಲೆಗಳಲ್ಲಿ ಶಾಲೆ ಕಾಲೇಜು ತೆರೆಯುವ, ಮುಚ್ಚುವ ತೀರ್ಮಾನ ಜಿಲ್ಲಾಡಳಿತದ ವಿವೇಚನೆಗೆ ನೀಡಲಾಗಿದೆ.

ಕಡಿಮೆ ಪ್ರಕರಣಗಳಿದ್ದರೆ 3 ದಿನ, ಹೆಚ್ಚು ಪ್ರಕರಣಗಳಿದ್ದರೆ 7 ದಿನ ಶಾಲೆ – ಕಾಲೇಜು ಬಂದ್ ಮಾಡಬಹುದು. ಶಾಲೆಯನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತದೆ ವಿನಃ ಜಿಲ್ಲೆ, ನಗರಕ್ಕೆ ಈ ನಿಯಮ ಅನ್ವಯವಾಗದು.

ಬೆಂಗಳೂರು ಹೊರತು ಪಡಿಸಿದರೆ ಉಳಿದೆಲ್ಲಾ ಕಡೆಗಳಲ್ಲಿ ಶಾಲೆಗಳು ಇರುತ್ತವೆ. ಬೆಂಗಳೂರಿನಲ್ಲಿ ಶಾಲೆ ಓಪನ್ ಬಗ್ಗೆ ಜನವರಿ 29 ರಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು.

ಸಭೆಯಲ್ಲಿ 12 ತಜ್ಞರು ಪಾಲ್ಗೊಂಡಿದ್ದರು. ಅವರ ಅಭಿಪ್ರಾಯದ ಜೊತೆಗೆ ಸಚಿವರು, ಇಲಾಖಾವಾರು ಮಾಹಿತಿ ಸಂಗ್ರಹಿಸಿದ ಸಿಎಂ ವಾರಾಂತ್ಯದ ಕರ್ಫ್ಯೂ ರದ್ದು ಮಾಡಿದ್ದಾರೆ.