ಮದ್ಯ ಪ್ರಿಯರಿಗೆ ಸಂತಸದ ಸುದ್ದಿ!! ಇನ್ನು ಮುಂದೆ ಮನೆಯಲ್ಲಿಯೇ ತೆರೆಯಬಹುದು ಮಿನಿ ಬಾರ್-ಅನುಮತಿ ನೀಡಿದ ರಾಜ್ಯ ಸರ್ಕಾರ
ಮಧ್ಯಪ್ರದೇಶ: ಮದ್ಯ ಪ್ರಿಯರಿಗೆ ಇದೊಂದು ಖುಷಿಯ ವಿಚಾರ ಅನ್ನುವುದಕ್ಕಿಂತಲೂ ಕೆಲಸದ ಒತ್ತಡದಿಂದ ಇರುವವರಿಗಂತೂ ಉಪಯುಕ್ತವಾಗಿದೆ. ಯಾಕೆಂದರೆ ಹೊರಗಡೆ ಬಾರ್ ಗೆ ಹೋಗುವುದು, ವಾಹನ ಖರ್ಚು,ಇದೆಲ್ಲವೂ ಉಳಿತಾಯ ಕೂಡಾ ಆಗಲಿದ್ದು ಅದಲ್ಲದೇ ಕುಡಿದು ವಾಹನ ಚಲಾವನೆ ಮಾಡುವುದರಿಂದ ಆಗುವ ರಸ್ತೆ ಅಪಘಾತಗಳನ್ನೂ ತಪ್ಪಬಹುದು.ಹೌದು, ಮಧ್ಯಪ್ರದೇಶ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಶಾಸಕಾಂಗ ಸಮಿತಿಯು 2022 ನೇ ಸಾಲಿನಲ್ಲಿ ಹೊಸ ಅಬಕಾರಿ ನೀತಿಯೊಂದನ್ನು ರೂಪಿಸಿದ್ದು,ಇದರಲ್ಲಿ ವಿದೇಶದಿಂದ ತರುವ ಮಾಲ್ ಗಳಿಗೆ ಶೇ.10 ರಿಂದ 13 ರಷ್ಟು ಸುಂಕ ಕಡಿತಗೊಳಿಸಿದ್ದು, ಅದಲ್ಲದೇ ವಾರ್ಷಿಕ ಆದಾಯ ಒಂದು ಕೋಟಿಗಿಂತ ಮೇಲಿದ್ದವರಿಗೆ ಮನೆಯಲ್ಲಿಯೇ ಮಿನಿ ಬಾರ್ ತೆರೆಯಲು ಅವಕಾಶ ನೀಡಿದೆ.
ಮದ್ಯ ಶೇಖರಣೆಯ ಪ್ರಮಾನವನ್ನು ಹೆಚ್ಚಳಗೊಳಿಸಲಾಗಿದ್ದು, ಮನೆಯಲ್ಲಿ ಮದ್ಯ ಶೇಖರಣೆ ಮಾಡುವವರು 50 ಸಾವಿರ ಶುಲ್ಕ ಪಾವತಿಸಿ ಅನುಮತಿ ಪಡೆಯುವುದಲ್ಲದೇ,ಒಂದು ಬಾಕ್ಸ್ ಬಿಯರ್,6 ಬಾಟಲಿ ವೈನ್,4 ಬಾಟಲಿ ಸ್ಪಿರಿಟ್ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ.
ಅದಲ್ಲದೇ ನಾಲ್ಕು ಹೆಚ್ಚು ಜನಸಂದಣಿ ಇರುವ ಮಾರ್ಕೆಟ್, ವಿಮಾನ ನಿಲ್ದಾಣಗಳಲ್ಲಿ ಮದ್ಯ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ.