ಇನ್ಫೋಸಿಸ್ ವತಿಯಿಂದ ಚೆಂಬುಗುಡ್ಡೆಯಲ್ಲಿ ಚಿತಾಗಾರದ ಕಾರ್ಯ ಸಂಪೂರ್ಣ

Share the Article

ಉಳ್ಳಾಲ : ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ಚಿತಾಗಾರವು ಸಂಪೂರ್ಣವಾಗಿದೆ. ಚೆಂಬುಗುಡ್ಡೆ ಹಿಂದೂ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದ ನಿರ್ಮಾಣ ಕಾರ್ಯ ಸಂಪೂರ್ಣ ಪೂರ್ಣಗೊಂಡಿದೆ.

2021 ರ ಜು.12 ರಂದು ವಿದ್ಯುತ್ ಚಿತಾಗಾರದ ಶಿಲಾನ್ಯಾಸವನ್ನು ಜಿಲ್ಲಾಡಳಿತ ನೆರವೇರಿಸಿತ್ತು. ಸುಮಾರು 1.80 ಕೋಟಿ ರೂಪಾಯಿ ವೆಚ್ಚದಲ್ಲಿ 3000 ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಾಣವಾದ ಕಟ್ಟಡದೊಳಗೆ ಕ್ರಿಮೆಟೋರಿಯಂ ಬಹುಭಾಗವನ್ನು ಹೊಂದಿದೆ. ಎಲೆಕ್ಟ್ರಿಕ್ ಕೊಠಡಿ, ಕಚೇರಿ, ಶೌಚಾಲಯವನ್ನು ಕೂಡಾ ನಿರ್ಮಿಸಲಾಗಿದೆ.

ಇನ್ಫೋಸಿಸ್ ಸಂಸ್ಥೆಯ ಕಾಮಗಾರಿ ಐಆರ್ ಡಬ್ಲ್ಯೂ ಕನ್ ಸ್ಟ್ರಕ್ಷನ್ಸ್ ಕಂಪನಿ ಈ ಚಿತಾಗಾರದ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ಮಿಸಿದೆ. ನ.30 ರಂದೇ ಚಿತಾಗಾರದ ಕಾಮಗಾರಿ ಪೂರ್ಣಗೊಂಡಿತ್ತು. ವಿದ್ಯುತ್ ಸಂಪರ್ಕದ ವ್ಯವಸ್ಥೆ ಯಾಗದೇ ಕೆಲಸ ಹಿನ್ನೆಡೆಯಾಗಿತ್ತು.

42 ಕಿಲೋ ವ್ಯಾಟ್ ವಿದ್ಯುತ್ ಸಾಮರ್ಥ್ಯವನ್ನು ಚಿತಾಗಾರಕ್ಕೆ ಅಳವಡಿಸಲಾಗಿದೆ. ಒಂದು ಹೆಣ ಸುಡಲು ₹400/- ವಿದ್ಯುತ್ ಖರ್ಚಾಗಲಿದೆ. ಮಾಸಿಕವಾಗಿ ಲೆಕ್ಕಾಚಾರ ಮಾಡಿಕೊಂಡರೆ 42 ಕಿ.ವ್ಯಾ‌ ವಿದ್ಯುತ್ ಗೆ ಕನಿಷ್ಠ ₹ 15000 ವಿದ್ಯುತ್ ಖರ್ಚಾಗ ಬಹುದು.

ಈ ವಿದ್ಯುತ್ ಚಿತಾಗಾರದ ಅಳವಡಿಕೆಯನ್ನು ಬೆಂಗಳೂರಿನ ಪ್ರಭಾಕರ್ ಮಾಡಿದ್ದಾರೆ. ಮಂಗಳೂರಿನ ಬೋಳೂರಿನಲ್ಲಿರುವ ಪ್ರಭಾಕರ್ ಮಾರ್ಗದರ್ಶನದಂತೆ ಈ ಚಿತಾಗಾರವನ್ನು ಅಳವಡಿಸಲಾಗಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿರುವ ಚೆಂಬುಗುಡ್ಡೆ ಹಿಂದೂ ಸ್ಮಶಾನ ಐವತ್ತು ವರ್ಷಕ್ಕಿಂತಲೂ ಹಳೆಯದಾಗಿದೆ. ಜಿಲ್ಲಾಡಳಿತ ಒಪ್ಪಿಗೆ ನೀಡಿದ ಎಂಟು ತಿಂಗಳಲ್ಲಿ ವಿದ್ಯುತ್ ಚಿತಾಗಾರ ಚೆಂಬುಗುಡ್ಡೆಯಲ್ಲಿ ನಿರ್ಮಾವಾಗಿದೆ.

ಇನ್ಫೋಸಿಸ್ ಫೌಂಡೇಶನ್ ಉಳ್ಳಾಲ ನಗರ ಸಭೆಗೆ ಚಿತಾಗಾರವನ್ನು ಹಸ್ತಾಂತರಿಸಿದ ಬಳಿಕ ಸ್ಮಶಾನದಲ್ಲಿ ಒಬ್ಬ ಅಪರೇಟರ್ ನ್ನು ನಗರಸಭೆ ವಹಿಸಬೇಕು.

ವರ್ಷಕ್ಕೆ 400 ಕ್ಕೂ ಹೆಚ್ಚು ಶವಸಂಸ್ಕಾರ ಸ್ಮಶಾನದಲ್ಲಿ ಆಗುತ್ತಿದೆ. ಈ ನಡುವೆ 10 ವರ್ಷಗಳಿಂದ ಜನಸಂಖ್ಯೆ ಹೆಚ್ಚುತ್ತಿದೆ‌. ಸ್ಮಶಾನದಲ್ಲಿ ಸುಡಬೇಕಾದರೆ ಸಾವಿರಗಟ್ಟಲೆ ಕ್ವಿಂಟಲ್ ಲೆಕ್ಕದಲ್ಲಿ ಕಟ್ಟಿಗೆಯೂ ಬೇಕು. ಈ ನಿಟ್ಟಿನಲ್ಲಿ ವಿದ್ಯುತ್ ಚಿತಾಗಾರದ ಬೇಡಿಕೆ ಇಡಲಾಗಿತ್ತು.

ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಪೆರ್ಮನ್ನೂರು ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಚೆಂಬುಗುಡ್ಡೆ ಸ್ಮಶಾನವು ಹೆಚ್ಚು ಬಳಕೆಯಾಗಲಿದೆ.

Leave A Reply