Home News ‘ಸೆಲ್ಫಿ’ಯಿಂದ ಐದು ದಿನಗಳಲ್ಲಿ ಲಕ್ಷಾಧಿಪತಿಯಾದ ಯುವಕ|ಅದೇಗೆ ಎಂಬ ಕುತೂಹಲ ಇದ್ದವರು ಇಲ್ಲಿ ನೋಡಿ..

‘ಸೆಲ್ಫಿ’ಯಿಂದ ಐದು ದಿನಗಳಲ್ಲಿ ಲಕ್ಷಾಧಿಪತಿಯಾದ ಯುವಕ|ಅದೇಗೆ ಎಂಬ ಕುತೂಹಲ ಇದ್ದವರು ಇಲ್ಲಿ ನೋಡಿ..

Hindu neighbor gifts plot of land

Hindu neighbour gifts land to Muslim journalist

ಇಂದು ಎಲ್ಲೆಲ್ಲೂ ಡಿಜಿಟಲ್ ಮಯ. ಅದರಲ್ಲೂ ಸ್ಮಾರ್ಟ್ ಫೋನ್ ಎಲ್ಲರ ಕೈಯಲ್ಲೂ ಮಾಮೂಲ್. ಆದ್ರೆ ಈ ಸ್ಮಾರ್ಟ್ ಫೋನ್ ಕರೆ ಮಾಡಲು ಉಪಯೋಗಿಸುವುದಕ್ಕಿಂತಲೂ ಸೆಲ್ಫಿ, ಚಾಟ್ ಮಾಡಲೇ ಅಧಿಕವಾಗಿ ಬಳಸುತ್ತಾರೆ. ಅದರಲ್ಲೂ ಇಂದಿನ ಕಾಲನೇ ಹಾಗೆ, ಎಲ್ಲಿ ಒಂದು ಕಾರ್ಯಕ್ರಮ ನಡೆಯುತ್ತಿದ್ದರೂ ಒಬ್ಬರಾದರೂ ‘ಸೆಲ್ಫಿ ಪ್ಲೀಸ್’ ಅನ್ನುತ್ತಿರುವ ಮಾತು ಕೇಳೇ ಇರುತ್ತೇವೆ. ಬೇರೆಯವರು ಯಾಕೆ ನಾವೇ ಈ ಸಾಲಿನಲ್ಲಿ ಇದ್ದೀವಿ ಅಲ್ವಾ?

ಇಷ್ಟೆಲ್ಲಾ ವಿಷಯದ ಕುರಿತು ಆಳವಾಗಿ ಇಳಿಯಲು ಇಲ್ಲಿದೆ ನೋಡಿ ಒಂದು ಇಂಟೆರೆಸ್ಟಿಂಗ್ ಸ್ಟೋರಿ. ಹೌದು. ಇಲ್ಲೊಬ್ಬ ಕೇವಲ ಸೆಲ್ಫಿಯಿಂದಲೇ ಲಕ್ಷಾಧಿಪತಿ ಆಗಿದ್ದಾನಂತೆ. ಅದೇಗೆ ಎಂಬ ಪ್ರಶ್ನೆ ನಮ್ಮಂತೆ ನಿಮಗೂ ಕಾಡಿರಬೇಕಲ್ವಾ?.. ಹಾಗಿದ್ರೆ ಇಲ್ಲಿದೆ ನೋಡಿ ಆತನ ಡೀಟೇಲ್ ಕಹಾನಿ..

ಮಲೇಷ್ಯಾದ ಯುವಕ ”ಘೋಂಜಾಲಿ”, ತನ್ನ 17ನೇ ವಯಸ್ಸಿನಿಂದ ನಿತ್ಯ ನೂರಾರು ಸೆಲ್ಫಿಗಳನ್ನು ಕ್ಲಿಕ್ಕಿಸಿದ್ದಾನೆ. ಅವುಗಳ ಸಂಗ್ರಹವು ಲಕ್ಷಾಂತರವಾಗಿದೆ. ಹೀಗೆ ಸೆಲ್ಫಿಗಳನ್ನು ಸಂಗ್ರಹಿಸುವ ಬದಲು ಫೋಟೊಗಳನ್ನು ನಾನ್‌ ಫಂಜಿಬಲ್‌ ಟೋಕನ್‌ (ಡಿಜಿಟಲ್‌ ಟೋಕನ್‌- ಎನ್‌ಎಫ್‌ಟಿ) ಆಗಿ ಪರಿವರ್ತಿಸುವ ಐಡಿಯಾ ಆತನಿಗೆ ಹೊಳೆದಿದೆ.

ಈ ಡಿಜಿಟಲ್‌ ಟೋಕನ್‌ಗಳನ್ನು ಪ್ರೊಫೈಲ್‌ ಫೋಟೊಗಳಾಗಿ ಬಳಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಇದೊಂದು ಮಾದರಿಯಲ್ಲಿ ಡಿಜಿಟಲ್‌ ಸ್ವತ್ತು ಕೂಡ ಎಂಬ ಭಾವನೆ ಇದೆ. ಸಾವಿರಾರು ಜನರು ಇದೇ ಕೆಲಸದಲ್ಲಿ ತೊಡಗಿದ್ದಾರೆ ಕೂಡ. ಇಂಥ ಟೋಕನ್‌ಗಳು ಬಿಟ್‌ಕಾಯಿನ್‌ಗಳಂತೆ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ. ಆಸಕ್ತರು ನಿಮ್ಮನ್ನು ಸಂಪರ್ಕಿಸಿ ಎನ್‌ಎಫ್‌ಟಿಗೆ ಮೌಲ್ಯ ನಿಗದಿಪಡಿಸುತ್ತಾರೆ. ನಿಮಗೆ ಒಪ್ಪಿಗೆ ಇದ್ದಲ್ಲಿ ನಿಮ್ಮ ಫೋಟೊವು ಎನ್‌ಎಫ್‌ಟಿ ಆಗಿ ಮಾರಾಟವಾಗಲಿದೆ. ಇದು ಖಾಸಗಿತನವನ್ನು ಮಾರಾಟ ಮಾಡಿದಂತೆಯೇ ಸರಿ ಎಂಬ ಆಕ್ಷೇಪ ಕೂಡ ಹಲವರಿಂದ ಕೇಳಿಬಂದಿದೆ.

ಆದರೆ, ಘೋಂಜಾಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜ.9 ರಿಂದ ತನ್ನ ಎನ್‌ಎಫ್‌ಟಿ ಮಾರಾಟ ಆರಂಭಿಸಿ ಕೇವಲ 5 ದಿನಗಳಲ್ಲಿಯೇ ಆತ ಲಕ್ಷಾಧಿಪತಿ ಆಗಿದ್ದಾನೆ. ಒಟ್ಟು 331 ಎನ್‌ಎಫ್‌ಟಿ ಮಾರಾಟವಾಗಿದೆ. ನನ್ನ ಕೆಲವು ವಿಚಿತ್ರ ಫೋಟೊಗಳನ್ನು ಕಂಡು ನಿಂದಿಸಬೇಡಿರಿ, ಪೋಷಕರಿಗೆ ಬೇಜಾರಾಗುತ್ತದೆ ಎಂದು ಘೋಂಜಾಲಿ ಮನವಿ ಮಾಡಿದ್ದಾನೆ ಕೂಡ.