ರಾಜ್ಯದ ಜನತೆಗೆ ಕಾದಿದೆ ಮತ್ತೊಂದು ಬೆಲೆಯೇರಿಕೆಯ ಶಾಕ್ !! | ನಂದಿನಿ ಹಾಲಿನ ದರ ಲೀಟರ್ ಗೆ 3 ರೂ. ಹೆಚ್ಚಳ ಸಾಧ್ಯತೆ

ದಿನೋಪಯೋಗಿ ಸಾಮಾಗ್ರಿಗಳ ಬೆಲೆ ಏರಿಕೆ ಜೊತೆಗೆ ಹಾಲಿನ ದರವೂ ಹೆಚ್ಚಾದ್ರೆ ಗಾಯದ ಮೇಲೆ ಬರೆ ಬಿದ್ದಂತಾಗುತ್ತದೆ. ಇದೀಗ ಹಾಲಿನ ಬೆಲೆ ಏರಿಕೆಯ ಬಗ್ಗೆ ಕೆಎಂಎಫ್ ಅಧ್ಯಕ್ಷ ಜಾರಳಿಹೊಳಿಯೇ ಸುಳಿವು ನೀಡಿದ್ದಾರೆ.

ನಂದಿನ ಹಾಲಿನ ದರ ಹೆಚ್ಚಾದರೆ ಮತ್ತೆ ರಾಜ್ಯದ ಜನರ ಜೇಬಿಗೆ ಕತ್ತರಿ ಬೀಳೋದು ಗ್ಯಾರೆಂಟಿ. ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ. 1 ಲೀಟರ್ ನಂದಿನಿ ಹಾಲಿನ ಪ್ರಸ್ತುತ ಬೆಲೆ 37 ರೂ ಇದೆ. ಜಿಲ್ಲಾ ಹಾಲು ಒಕ್ಕೂಟಗಳ ಬೇಡಿಕೆಗೆ ಸರ್ಕಾರ ಮಣಿದರೆ 1 ಲೀಟರ್ ನಂದಿನಿ ಹಾಲಿನ ಬೆಲೆ 40 ರೂ ಆಗಲಿದೆ. ಅಂದ್ರೆ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಲಿದೆ. ಜೊತೆಗೆ ಮೊಸರು ಹಾಗೂ ಹಾಲಿನಿಂದ ತಯಾರಾಗೋ ಉತ್ಪನ್ನಗಳ ಬೆಲೆಯು ಹೆಚ್ಚಾಗೋ ಸಾಧ್ಯತೆ ಇದೆ.

ಕರ್ನಾಟಕ ಹಾಲು ಮಹಾಮಂಡಳಿ ನಡೆಸಿದ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದೆ. ಕೊರೋನಾ ಸಾಂಕ್ರಾಮಿಕ ರೋಗ ಸಮಯದಲ್ಲಿ ಮಾರಾಟದ ಕುಸಿತದಿಂದ ಕೆಎಂಎಫ್ ಹಾಗೂ ಇತರೆ ಹಾಲು ಒಕ್ಕೂಟಗಳು ನಷ್ಟ ಅನುಭವಿಸಿದೆ. ಹೀಗಾಗಿ ಕಳೆದ 6 ತಿಂಗಳಿಂದ ಬೆಲೆ ಪರಿಷ್ಕರಣೆಗೆ ಯತ್ನಿಸುತ್ತಿದೆ.

ರಾಜ್ಯದ 14 ಹಾಲು ಒಕ್ಕೂಟಗಳು ನಷ್ಟದ ಹಾದಿಯಲ್ಲಿ ಸಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಹಾಲಿನ ದರ ಹೇರಿಕೆಗೆ ಅನುಮತಿ ನೀಡಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬೆಲೆ ಏರಿಕೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ನಂದಿನಿ ಹಾಲಿನ ದರ ಕಡಿಮೆ ಇದೆ. ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 37 ರೂಪಾಯಿಯಂತೆ ಮಾರಾಟ ಮಾಡಲಾಗ್ತಿದೆ. ಹಾಲಿನ ದರದಲ್ಲಿ ಪ್ರತಿ ಲೀಟರ್ ಹಾಲಿಗೆ 3ರೂ ಹೆಚ್ಚಳಕ್ಕೆ ಒಕ್ಕೂಟಗಳು ಮನವಿ ಮಾಡಿದೆ. ಹೀಗಾಗಿ ಪ್ರತಿ ಲೀಟರ್ ಹಾಲಿಗೆ 4ರೂ ದರ ನಿಗದಿಪಡಿಸಲಾಗುತ್ತೆ ಎಂದು ಜಾರಕಿಹೊಳಿ ಹೇಳಿದ್ದಾರೆ.

ಹಾಲಿನ ಬೆಲೆ ಹೆಚ್ಚಾದ್ರೆ ರೈತರಿಗೆ ಸಿಗೋದೆಷ್ಟು ಗೊತ್ತಾ?

ರಾಜ್ಯದ ಹಾಲು ಒಕ್ಕೂಟಗಳ ಮನವಿಗೆ ಸರ್ಕಾರ ಮಣಿದು ಹಾಲಿನ ಬೆಲೆ ಹೆಚ್ಚಾದ್ರೆ 2.5 ರೂಪಾಯಿ ಸಿಗಲಿದೆ. ಪ್ರತಿ ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಳವಾದ್ರೆ ಅದರಲ್ಲಿ ರೈತರಿಗೆ 2.5 ರೂಪಾಯಿ ಸಿಗಲಿದ್ದು, 50 ಪೈಸೆಯನ್ನು ಸಂಘಗಳು ಉಳಿಸಿಕೊಳ್ಳಲಿವೆ.

Leave A Reply

Your email address will not be published.