Home latest ಮದ್ಯಪ್ರಿಯರೇ ಇತ್ತ ಗಮನಿಸಿ , ‘ವೀಕೆಂಡ್ ಕರ್ಫ್ಯೂ’ ಹಿನ್ನೆಲೆ ಇಂದು ರಾತ್ರಿ 10 ರಿಂದ ಸೋಮವಾರ...

ಮದ್ಯಪ್ರಿಯರೇ ಇತ್ತ ಗಮನಿಸಿ , ‘ವೀಕೆಂಡ್ ಕರ್ಫ್ಯೂ’ ಹಿನ್ನೆಲೆ ಇಂದು ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆವರೆಗೆ ಬಾರ್ ಬಂದ್

Hindu neighbor gifts plot of land

Hindu neighbour gifts land to Muslim journalist

ರಾಜ್ಯ ಸರಕಾರದಿಂದ ಕೊರೊನಾ ನಿಯಂತ್ರಣಕ್ಕಾಗಿ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಳೆದ ವಾರದ ವೀಕೆಂಡ್ ಸಂದರ್ಭದಲ್ಲಿ ಮಧ್ಯದ ಅಂಗಡಿಗಳನ್ನು ಸರಕಾರ ಬಂದ್ ಮಾಡಿತ್ತು.

ರಾಜ್ಯ ಸರಕಾರ ಕಳೆದ ವಾರದ ವೀಕೆಂಡ್ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿ ಕ್ರಮದ ಹಿನ್ನೆಲೆಯಲ್ಲಿ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಬೇಕೆಂದು ಆದೇಶಿಸಿತ್ತು. ಇದರಿಂದ ಕೋಟಿ ನಷ್ಟ ಉಂಟಾಗುತ್ತೆ ಬಾರ್ ಬಂದ್ ಮಾಡಬೇಡಿ ಎಂದು ಅಬಕಾರಿ ಸಚಿವರು ಸಿಎಂಗೆ ಸಲಹೆ ನೀಡಿದ್ದರೂ ಸಿಎಂ ನೋ ಅಂತ ಬಂದ್ ನಿರ್ಧಾರ ಪ್ರಕಟಿಸಿದ್ದರು.

ಈ ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಆದ್ರೂ ಮದ್ಯ ಮಾರಾಟಕ್ಕೆ ರಾಜ್ಯ ಸರಕಾರ ಅವಕಾಶ ನೀಡಲಿದೆ ಎನ್ನುವ ನಿರೀಕ್ಷೆಯಲ್ಲಿ ಮದ್ಯ ಪ್ರಿಯರಿದ್ದರು. ಆದರೆ ಇಂದು ರಾತ್ರಿ‌ 10 ಗಂಟೆಯಿಂದ ಸೋಮವಾರ ಬೆಳಿಗ್ಗೆಯವರೆಗೆ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಸ್ವತಃ ಅಬಕಾರಿ ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ.

ಈ ಮೂಲಕ ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಿದ್ದಾರೆ.