ನವಜಾತ ಶಿಶುವನ್ನು ಗುಡ್ಡದಲ್ಲಿ ಬಿಟ್ಟು ಹೋದ ನಿಷ್ಕರುಣಿ ತಾಯಿ ; ಹುಟ್ಟುತ್ತಲೇ ಅನಾಥವಾದ ಮಗು

Share the Article

ತಾನು ಹೆತ್ತ ಮಗುವನ್ನು ತಾಯಿಯೊಬ್ಬಳು ಗುಡ್ಡದಲ್ಲಿ ನಿಷ್ಕರುಣಿಯಾಗಿ ಬಿಟ್ಟುಹೋಗಿರುವ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ನವಜಾತ ಗಂಡು ಮಗುವನ್ನು ನಿರ್ದಯಿ ಮನಸ್ಸಿನ ತಾಯಿಯೋರ್ವಳು ಹುಟ್ಟುತ್ತಲೇ ಗುಡ್ಡದಲ್ಲಿ ಬಿಟ್ಟು ಹೋಗಿದ್ದಾಳೆ. ಈ ಘಟನೆ ಹಾನಗಲ್ ತಾಲೂಕಿನ ಮಾರಂಬೀಡ ಗ್ರಾಮದಲ್ಲಿ ನಡೆದಿದೆ.

ಗುಡ್ಡದಲ್ಲಿ ಅಳುತ್ತಿರುವ ಮಗುವಿನ ಧ್ವನಿ ಕೇಳಿದ ಸ್ಥಳೀಯರು ನವಜಾತ ಶಿಶುವನ್ನು ರಕ್ಷಿಸಿದ್ದಾರೆ. ಸ್ಥಳಕ್ಕೆ ಸ್ಪಂದನಾ ದತ್ತು ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲ‌ನೆ ನಡೆಸಿದರು.

ಶಿಶುವಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಅದಕ್ಕೆ ನರೇಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಸ್ಪಂದನಾ ದತ್ತು ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ.

ಸ್ಥಳೀಯರು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದು,ಈ ಪ್ರಕರಣ ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave A Reply