Home News ಉಡುಪಿ ಉಡುಪಿ : ಹಿರಿಯ ಪತ್ರಕರ್ತ, ಖ್ಯಾತ ಸಂಗೀತ ನಿರ್ದೇಶಕ ವಾಸುದೇವ ಭಟ್ ನಿಧನ

ಉಡುಪಿ : ಹಿರಿಯ ಪತ್ರಕರ್ತ, ಖ್ಯಾತ ಸಂಗೀತ ನಿರ್ದೇಶಕ ವಾಸುದೇವ ಭಟ್ ನಿಧನ

Hindu neighbor gifts plot of land

Hindu neighbour gifts land to Muslim journalist

ಉಡುಪಿ : ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ, ಇಂದ್ರಾಳಿಯ ನಿವಾಸಿ ವಾಸುದೇವ ಭಟ್ ನಿಧನರಾಗಿದ್ದಾರೆ‌.

ಉಡುಪಿಯಲ್ಲಿ ನಾದವೈಭವಂ ಎಂಬ ಕಲಾ ಸಂಘಟನೆಯನ್ನು ಹುಟ್ಟು ಹಾಕಿದ ಕೀರ್ತಿ ವಾಸುದೇವ ಭಟ್ ಅವರಿಗೆ ಸಲ್ಲುತ್ತದೆ. 1994 ರಲ್ಲಿ ಭುವನ ಜ್ಯೋತಿ ಎಂಬ ಐದು ಭಾಷೆಗಳಲ್ಲಿ ರಚಿತವಾದ ಪ್ರಭು ಯೇಸು ಸ್ವಾಮಿಯ ಜೀವನಾಧಾರಿತ ಚಲನಚಿತ್ರ ತಯಾರಿಸಿ ಹಲವರಿಗೆ ಪಾತ್ರ ನೀಡಿದ್ದರು.

ಅನೇಕ ಸಂಗೀತ ನೃತ್ಯ ರೂಪಕ ಹಾಗೂ ಚಲನಚಿತ್ರಗಳನ್ನು ರಚಿಸಿ ನಿರ್ದೇಶಿಸಿ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡವರು ವಾಸುದೇವ ಭಟ್ ಅವರು.

ಇವರು ಅಪಾರ ಸಂಗೀತ ಕ್ಷೇತ್ರದ ಶಿಷ್ಯ ವೃಂದವನ್ನು ಅಗಲಿದ್ದಾರೆ. ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರಿಂದ ಸಂಗೀತ ಕಲಿತವರು ರಾಷ್ಟ್ರ ಮಟ್ಟದಲ್ಲಿ ಹಾಡುಗಾರಿಕೆಯಲ್ಲಿ ಹೆಸರು ತಂದವರು ತುಂಬಾ ಮಂದಿ ಇದ್ದಾರೆ.