Home Entertainment ಮದುವೆಗೆ ಸಿದ್ಧವಿಲ್ಲದ ಹುಡುಗಿ ಜೊತೆ ಸಪ್ತಪದಿ ತುಳಿಯಲು ತಯಾರಾದ ವರ !! | ಅದ್ಧೂರಿಯಾಗಿ ಮದರಂಗಿ...

ಮದುವೆಗೆ ಸಿದ್ಧವಿಲ್ಲದ ಹುಡುಗಿ ಜೊತೆ ಸಪ್ತಪದಿ ತುಳಿಯಲು ತಯಾರಾದ ವರ !! | ಅದ್ಧೂರಿಯಾಗಿ ಮದರಂಗಿ ಕಾರ್ಯಕ್ರಮ ಮುಗಿಸಿ,ಮದುವೆ ಮಂಟಪಕ್ಕೆ ಬಂದ ವರನಿಗೆ ಮಾತ್ರ ಕಾದಿತ್ತು ಬಿಗ್ ಶಾಕ್

Hindu neighbor gifts plot of land

Hindu neighbour gifts land to Muslim journalist

ಮದುವೆ ಎಂಬುದು ಪ್ರತಿಯೊಬ್ಬ ಹುಡುಗ-ಹುಡುಗಿಯ ಮರೆಯಲಾಗದ ದಿನವೆಂದೇ ಹೇಳಬಹುದು. ಆದ್ರೆ ‘ಅತೀ ಆಸೆ ಗತಿ ಗೇಡು’ಎಂಬ ಗಾದೆನಾ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಇದೇ ಗಾದೆಯ ರೀತಿ ಇಲ್ಲೊಂದು ನಿಜ ಘಟನೆ ನಡೆದಿದ್ದು,ಇನ್ನೇನು ಮದುವೆ ಆಗುತ್ತಿನೆಂದು ತುದಿಗಾಲಲ್ಲಿ ಇದ್ದ ವರನಿಗೆ ಆಗಿತ್ತು ನಿರಾಸೆ.ಆದ್ರೆ ಇಲ್ಲಾದ ಮೋಸಕ್ಕೆ ಕಾರಣ ಆತನ ಸ್ನೇಹಿತನಂತೆ. ಅಷ್ಟಕ್ಕೂ ಇಲ್ಲಿ ನಡೆದಿರೋದು ಮಾತ್ರ ಮದುವೆಗೆ ಹೆಣ್ಣೇ ತಯಾರಿಲ್ಲದ ವರನ ಮದುವೆಯ ಸಂಭ್ರಮ.

ಹೌದು.ಈ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ನಡೆದಿದ್ದು,ಮದುವೆಗೆ ಸಿದ್ಧವೇ ಇಲ್ಲದ ಹೆಣ್ಣಿಗಾಗಿ
ವರನೊಬ್ಬ ತಯಾರಾಗಿ, ಗಮ್ಮತ್ತಲ್ಲಿ ಮದರಂಗಿ, ಮದುವೆಯ ವ್ಯವಸ್ಥೆ ಮಾಡಿ ಪಚೀತಿಗೆ ಸಿಲುಕಿದಂತಾಗಿದೆ. ಗೆಳೆಯನ ಮಾತು ಕೇಳಿ ಇನ್ನೇನು ಮದುವೆಗೆ ಕೆಲವೇ ಘಂಟೆಗಳು ಇದೆ ಎನ್ನುವಾಗ ತಾನು ಮೋಸ ಹೋಗಿರುವ ವಿಚಾರ ತಿಳಿದು ಒಮ್ಮೆಗೆ ದಂಗಾಗಿದ್ದಾನೆ.ಯರನ್ನೂ ಅತಿಯಾಗಿ ನಂಬಬಾರದೆಂದು ಹೇಳುವುದೇ ಇದಕ್ಕೆ. ಅದೆಷ್ಟೇ ಆಪ್ತನಾದರೂ ತಮ್ಮ ಸಲುಗೆಯನ್ನು ಮನಸ್ಸಿಗೆ ಬಂದಂತೆ ಬಳಸಿಕೊಳ್ಳುವವರೇ ಹೆಚ್ಚು.

ಅದೇ ರೀತಿ ಇಲ್ಲಿ ಯುವಕನೊಬ್ಬ ತಂದೆ ತಾಯಿಯನ್ನು ಕಳಕೊಂಡು ಅನಾಥನಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ತನಗೊಂದು ಸಂಗಾತಿ ಬೇಕು ಎಂದು ವಧು ಅನ್ವೇಷಣೆಯಲ್ಲಿದ್ದ ಈತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಈತನ ಕುಡುಕ ಗೆಳೆಯನೊಬ್ಬ ಯುವಕನ ಬಾಲ್ಯದ ಗೆಳತಿಯ ಫೋಟೋ ತೋರಿಸಿ ಇವಳನ್ನು ನಿನಗೆ ಮದುವೆ ಮಾಡಿಸಿಕೊಡುತ್ತೇನೆ ಎಂದು ಹೇಳಿ ನಂಬಿಸಿದ್ದ.ಅಷ್ಟೇ ಅಲ್ಲದೆ ಯುವಕನನ್ನು ನಂಬಿಸಲು ಹುಡುಗಿಯ ಮನೆಯವರು ಮದುವೆಗೆ ಒಪ್ಪಿದ್ದಾರೆ, ಮದುವೆಗೆ ಸಕಲ ಸಿದ್ಧತೆ ಮಾಡಿಸು ಎಂದು ಹೇಳಿ ಆಗಾಗ್ಗೆ ಇವನೇ ವಧುವಿನ ಮನೆಯವರು ಎಂದು ಹೇಳಿ ಕರೆ ಮಾಡಿ
ಯುವಕನಿಗೆ ನಂಬಿಸುತ್ತಿದ್ದು ಮಾತ್ರವಲ್ಲದೆ ಹಣ ವಸೂಲಿ ಮಾಡುತಿದ್ದ.

ಮುಂದುವರಿದಂತೆ ಕಟೀಲು ದೇವಸ್ಥಾನದಲ್ಲಿ ಸೋಮವಾರ ಮದುವೆ ನಿಗದಿಯಾಗಿದ್ದು ಬಳಿಕ ಎರ್ಮಾಲಿನ ರಾಂದೇವ್ ಸಭಾಂಗಣದಲ್ಲಿ ಮುನ್ನೂರೈವತ್ತು ಜನರಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮದರಂಗಿಯ ಸಂದರ್ಭದಲ್ಲಿ ಕೂಡ ಆತನೊಂದಿಗೆ ಇದ್ದ ಕುಡುಕ ಸ್ನೇಹಿತ ವಧುವಿನ ಮನೆಮಂದಿ ಎಂಬುದಾಗಿ ಕರೆ ಮಾಡಿ ಯಾರ ಜೊತೆಯೋ ಮಾತಾಡಿಸಿದ್ದ.ಆದರೆ ಕೊನೆಗೆ ವಧುವಿನ ಮನೆಯವರಿಗೆ ಈ ಮದುವೆ ಇಷ್ಟವಿಲ್ಲವಂತೆ, ಅವರು ಬೇರೆ ಜಾತಿಯ ಹುಡುಗನಿಗೆ
ಹೆಣ್ಣು ಕೊಡುವುದಿಲ್ಲವಂತೆ ಎಂದು ಹೇಳಿ ಈ ಕಥೆಗೆ ಅಂತ್ಯ ಹಾಡಲು ಮುಂದಾಗಿದ್ದು ಈ ಮಾತು ಕೇಳಿ ವರನಿಗೆ ಶಾಕ್ ಆಗಿ ದಿಕ್ಕೇ ತೋಚದೆ ಮಂಕಾಗಿದ್ದಾನೆ.

ಇತ್ತ ವರನ ಗೆಳೆಯರು ವಧುವಿದ್ದೇ ತಪ್ಪು ಅಂದುಕೊಂಡು ಶಾಪ ಹಾಕಿದ್ದಾರೆ. ಕೊನೆಯಗಳಿಗೆಯಲ್ಲಿ ಮದುವೆ ರದ್ದುಪಡಿಸಿದ್ದಕ್ಕೆ ಅವರನ್ನು ಸುಮ್ಮನೆ ಬಿಡಬಾರದು ಎಂದು ಕೊಂಡು ಆ ವಧುವಿನ ಮನೆಯ ವಿಳಾಸ ವಿಚಾರಿಸಲು ಮುಂದಾದಾಗ ಕುಡುಕ ಗೆಳೆಯನ ಅಸಲಿ ಬಣ್ಣ ಬಯಲಾಗಿದೆ.ಈಷ್ಟೆಲ್ಲ ನಾಟಕದ ಸೂತ್ರದಾರ ಈ ಕುಡುಕನೇ ಎಂದು ಗೊತ್ತಾಗಿದ್ದು ಗೆಳೆಯರು ಕುಡುಕ ಗೆಳೆಯನಿಗೆ ಎರಡು ಏಟು ಚೆನ್ನಾಗಿ ಬಾರಿಸಿ ಮಂಗಳಾರತಿ ಮಾಡಿದ್ದಾರೆ.ಒಟ್ಟಾರೆ ಗೆಳೆಯನ ನಾಟಕ ವರನಿಗೆ ಮುಳುವಾಯಿತು. ಅತ್ತ ಮದುವೆ ಆಸೆಯೂ ನಿರಾಸೆಯಾಗಿ, ಇತ್ತ ಸ್ನೇಹಿತನ ಮೋಸಕ್ಕೆ ಬಲಿಯಾಗಿ ದಿಕ್ಕೇ ತೋಚದೆ ಸ್ನೇಹಿತನ ಹಂಗೇ ಬೇಡವೆನಿಸಿದೆ !!