Home latest ಮಾಸ್ಕ್ ಹಾಕಿ ಎಂದ ಪೊಲೀಸರಿಗೆ ಕಪಾಳ ಮೋಕ್ಷ ಮಾಡಿದ ಮಹಿಳೆ, ಗುಂಡು ಹಾರಿಸಿದ ವಕೀಲ !

ಮಾಸ್ಕ್ ಹಾಕಿ ಎಂದ ಪೊಲೀಸರಿಗೆ ಕಪಾಳ ಮೋಕ್ಷ ಮಾಡಿದ ಮಹಿಳೆ, ಗುಂಡು ಹಾರಿಸಿದ ವಕೀಲ !

Hindu neighbor gifts plot of land

Hindu neighbour gifts land to Muslim journalist

ನವದೆಹಲಿ : ಪಾರ್ಕಿನಲ್ಲಿ ಕುಳಿತುಕೊಂಡಿದ್ದ ಜೋಡಿಗೆ ಮಾಸ್ಕ್ ಹಾಕಿಕೊಳ್ಳಿ ಎಂದು ಪೊಲೀಸ್ ಒಬ್ಬ ಹೇಳಿದ್ದರಿಂದ ಸಿಟ್ಟುಗೊಂಡ ಜೋಡಿಯೊಂದು ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಆ ಗುಂಡು ಪೊಲೀಸ್ ಗೆ ತಾಗಲಿಲ್ಲ.

ಹೌದು ಇಂಥದ್ದೊಂದು ಘಟನೆ ನಡೆದಿರುವುದು ದೆಹಲಿಯ ಶಹದಾರ ಜಿಲ್ಲೆಯ ಸೀಮಾಪುರಿಯಲ್ಲಿ‌. ಇಲ್ಲಿಯ ದಿಲ್ ಶಾದ್ ಗಾರ್ಡನ್ ಬಳಿ ಭಾನುವಾರ ಬೆಳಿಗ್ಗೆ ಈ ಜೋಡಿ ಪಾರ್ಕ್ ನಲ್ಲಿ ಕುಳಿತಿತ್ತು. ಆ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಒಬ್ಬರು ಈ ಜೋಡಿಯನ್ನು ನೋಡಿದ್ದಾರೆ. ಅವರು ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವಂತೆ ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟುಗೊಂಡ ಮಹಿಳೆ ಕೂಡಲೇ ಪೊಲೀಸನ ಕೆನ್ನೆಗೆ ಹೊಡೆದಿದ್ದಾಳೆ. ಆಕೆಯ ಪ್ರಿಯಕರ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಆ ಪೊಲೀಸ್ ಗೆ ಗುಂಡು ತಾಗಲಿಲ್ಲ.

ಕೂಡಲೇ ಅಲ್ಲಿಗೆ ಪೊಲೀಸ್ ತಂಡ ಆಗಮಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೇಸ್ ಕೂಡಾ ದಾಖಲು ಮಾಡಲಾಗಿದೆ. ಆರೋಪಿಗಳು ಪೂರ್ವ ದೆಹಲಿಯ ಪಟ್ಪರ್ ಗಂಜ್ ಗ್ರಾಮದವ ನಿವಾಸಿಗಳು‌ ಪ್ರಿಯಕರ ವೃತ್ತಿಯಲ್ಲಿ ವಕೀಲನಾಗಿದ್ದು, ನಂದ ನಗರಿಯಲ್ಲಿ ಬಾಲಾಪರಾಧಿ ನ್ಯಾಯ ಮಂಡಳಿಯ ಕಲ್ಯಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ.